ಸಾಗರ – ಮಣಿಪಾಲ – ಮಂಗಳೂರಿಗೆ ನೇರ ಬಸ್ ಸಂಪರ್ಕ

0
8200

ರಿಪ್ಪನ್‌ಪೇಟೆ: ಸಾಗರದ ಶ್ರೀ ಗಜಾನನ ಮೋಟಾರ್ ಕಂಪನಿ ಅವರು ಸಾಗರ – ಆನಂದಪುರ – ರಿಪ್ಪನ್‌ಪೇಟೆ – ಕೋಣಂದೂರು ಮಾರ್ಗವಾಗಿ ಮತ್ತು ಸಾಗರ – ಹೊಸನಗರ ಮಾರ್ಗವಾಗಿ ಮಣಿಪಾಲ – ಮಂಗಳೂರಿಗೆ ನೇರ ಬಸ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಎಸ್.ಜಿ.ಎಂ.ಟಿ ಕಂಪನಿಯ ತಪಾಸಣಾ ಅಧಿಕಾರಿ ಹೆಚ್.ಎನ್.ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರದಿಂದ ಬೆಳಿಗ್ಗೆ 6:20ಕ್ಕೆ ಹೊರಟು ರಿಪ್ಪನ್‌ಪೇಟೆಗೆ 7:20 ಕ್ಕೆ ತಲುಪಿ ಮಣಿಪಾಲ್‌ಗೆ 10:50ಕ್ಕೆ ತಲುಪುವುದು ಸಂಜೆ 5:15ಕ್ಕೆ ಮಣಿಪಾಲದಿಂದ ಹೊರಟು ಸಾಗರಕ್ಕೆ 9:45ಕ್ಕೆ ತಲುಪುವುದು.

ಈ ಸಾರಿಗೆ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸ್ಟಾಂಡ್ ಏಜೆಂಟ್ ಆರ್.ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here