ಸಾಗರ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..! ಹೆರಿಗೆಗೆ ಪಡೆಯುತ್ತಾರೆ ಸಾವಿರಾರು ರೂ. ಲಂಚ..!?

0
827

ಸಾಗರ: ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದೆ. ಹೆರಿಗೆಗಾಗಿ ದಾಖಲಾಗುವಂತೆ ಮಹಿಳೆಯರಿಂದ ಲಂಚದ ಸುಲಿಗೆಯನ್ನೇ ಸಾವಿರಾರೂ ರೂಪಾಯಿಯಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಾಮಾನ್ಯ ಹೆರಿಗೆ ಬದಲು ಸಿಜೇರಿಯನ್ ಹೆರಿಗೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವಂತ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಸಾವಿರಾರೂ ರೂಪಾಯಿಯನ್ನು ಹೆರಿಗೆಗಾಗಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ದಿನಾಂಕ 25.03.2021 ರಂದು ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಗರದ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಸಾಕಷ್ಟು ಹೆರಿಗೆಗಾಳಾಗುತ್ತಿದ್ದು, 2,720 ಹೆರಿಗೆಗಳಾಗಿದ್ದಾಗಿ ತಿಳಿದು ಬಂದಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.15ಕ್ಕಿಂತ ಹೆಚ್ಚು ಸಿಸೇರಿಯನ್ ಮಾಡಬಾರದಾಗಿ ಸರ್ಕಾರಿ ಮಾನದಂಡ ಇದೆ. ಹೀಗಿದ್ದರೂ ಸಹ ಹೆಚ್ಚಾಗಿ ಸಿಸೇರಿಯನ್ ಮಾಡಿ ಜನರಿಂದ ಹಣ ವಸೂಲು ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಹಣಕ್ಕಾಗಿಯೇ ಈ ರೀತಿ ಸಿಸೇರಿಯನ್ ಮಾಡುತ್ತಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಅನುಕೂಲವಾಗಬೇಕೆ ಹೊರತು, ಈ ರೀತಿ ಹಣ ವಸೂಲು ಮಾಡುವ ಕೇಂದ್ರಗಳಾಗಬಾರದು. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವಹಿಸುವಂತೆ ಕೋರಿದ್ದಾರೆ.

ಅಂದಹಾಗೇ, ಹೆರಿಗೆ ವಿಭಾಗದ ಸಿಜಿರಿಯನ್ ಮಾಡಿದಕ್ಕೆ 5000 ರೂ. ಸಹಜ ಹೆರಿಗೆಗೆ 3000 ರೂ. ಅನಸ್ತೇಶಿಯಾ ವೈದ್ಯರಿಗೆ 2000 ರೂ. ಸಾಗರದ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭ್ರಷ್ಟ ವೈದ್ಯರು ಬಡವರ ರಕ್ತ ಹೀರುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತಂತೆ ಸಾರ್ವಜನಿಕರೊಬ್ಬರು ಮಾತನಾಡಿ, ವೈದ್ಯೋ ನಾರಾಯಣ ಹರಿಃ ಎಂದು ವೈದ್ಯ ವೃತ್ತಿಯನ್ನು ದೇವರಿಗೆ ಹೋಲಿಸುತ್ತಾರೆ. ಈ ಭ್ರಷ್ಟಾಚಾರ ನಡೆ ಕಡು ಬಡವರಿಗೆ ಯಮಲೋಕ ತೋರುಸುತ್ತಿದ್ದಾರೆ. ಹಣ ನೀಡಿಲ್ಲ ಅಥವಾ ಅವರು ಕೊಡೂದಿಲ್ಲ ಎಂತಾದರೇ ಕೂಡಲೇ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಇಲ್ಲಸಲ್ಲದ ನೇಪವೊಡ್ಡಿ ಕಳುಹಿಸುತ್ತಿದ್ದಾರೆ. ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡುತ್ತಿರುವ ವೈದ್ಯರಲ್ಲಿ ಒಂದು ಸವಿನಯ ವಿನಂತಿ ಇನ್ನಾದರೂ ಬಡವರ ರಕ್ತ ಹೀರುವುದನ್ನು ಬಿಟ್ಟು ಸರ್ಕಾರ ನೀಡುವ ಸಾರ್ವಜನಿಕ ತೆರಿಗೆ ಹಣದಲ್ಲಿ ನೀಡುವ ಸಂಬಳಕ್ಕೆ ಪ್ರಾಮಾಣಿಕ ವೈದ್ಯ ವೃತ್ತಿ ಸೇವೆಯನ್ನು ನೀಡಿ ಎಂಬುದಾಗಿ ಮನವಿ ಮಾಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here