ಸಾಗರ ವಕೀಲ ಎನ್.ಜಿ ಕನ್ನಪ್ಪನವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ; ಕೇಸ್ ದಾಖಲಿಸಲು ಆಗ್ರಹ

0
498

ಹೊಸನಗರ: ಸಾಗರ ನ್ಯಾಯಾಲಯದ ವಕೀಲರಾದ ಎನ್.ಜಿ. ಕನ್ನಪ್ಪನವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿದ್ದು ಅದು ಅಲ್ಲದೇ ನ್ಯಾಯಾಧೀಶರ ವಿರುದ್ದವೂ ಮಾತನಾಡಿದ್ದಾರೆ ಇದನ್ನು ಖಂಡಿಸಿ ಹೊಸನಗರದ ನ್ಯಾಯಾಲಯದ ನ್ಯಾಯವಾದಿಗಳು ಇಂದು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿದ್ದಾರೆ.

ನಂತರ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್ ಸಾಗರದ ವಕೀಲ ಎನ್.ಜಿ.ಕನ್ನಪ್ಪನವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ ಸಾಗರದ ನ್ಯಾಯಾಲಯದಲ್ಲಿ ವೈವಾಹಿಕ ಜೀವನ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳು ಶಿವಮೊಗ್ಗದ ನಿವಾಸಿಯಾಗಿರುವ ಪತಿ ಎಂ.ಡಿ. ವಸಂತ್‌ಕುಮಾರ್ ಎಂಬಾತನಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುತ್ತಾರೆ ಜೂನ್ 27ಕ್ಕೆ ಮುಂದೂಡಲಾಗಿತ್ತು ಮಹಿಳೆ ಪರ ವಕೀಲರಾಗಿರುವ ಕನ್ನಪ್ಪ ಅವರಿಗೆ ವಾಟ್ಸಾಪ್ ಕುರಿತಂತೆ ಜಾಲತಾಣಗಳಲ್ಲಿ ಅವಹೇಳನಕಾರಿ ಮಾತಾನಾಡಿದ್ದಾರೆ ಜೊತೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ.

ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಇಲ್ಲಿಯವರೆಗೆ ಎಫ್‌ಐಆರ್ ಹಾಕಿಲ್ಲ ಇಂಥಹ ಘಟನೆಗಳು ಆಗಾಗ ಮರುಕಳುಹಿಸುತ್ತಿದೆ ನಾವು ನ್ಯಾಯವಾದಿಯಾಗಿ ಕೆಲಸ ಮಾಡುವುದೇ ಕಷ್ಟಕರವಾಗಿದೆ ನಮಗೆ ಸರ್ಕಾರ ಬೆಂಬಲ ನೀಡಬೇಕು ಹಾಗೂ ನ್ಯಾಯವಾದಿಗಳ ಮೇಲೆ ದಬ್ಬಾಳಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳಬೇಕು ಎಫ್‌ಐಆರ್‌ನ್ನು ಸಾಗರ ಪೊಲೀಸರು ಇನ್ನೂ ಹಾಕದಿರುವುದು ಖಂಡನೀಯ. ತಕ್ಷಣ ಜೀವ ಬೆದರಿಕೆ ಹಾಕಿರುವವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಚಂದ್ರಪ್ಪ, ಖಾಜಾಂಚಿ ಗಗ್ಗ ಬಸವರಾಜ್, ವೈ.ಪಿ ಮಹೇಶ್, ಮುಕುಂದಚಂದ್ರ, ಮೋಹನಶೆಟ್ಟಿ, ಮಂಡಾಣಿ ಗುರು, ಈರಪ್ಪ, ಕರ್ಣಕುಮಾರ್, ಷಣ್ಮುಖಪ್ಪ, ಹಿರಿಯಪ್ಪ, ಪ್ರಶಾಂತ್, ಕೆ.ಎಸ್. ವಿನಾಯಕ, ಗುರುಕಿರಣ್, ವಿಜಯ, ದೇವರಾಜ್, ಕವಿತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here