ಸಾಗರ; ವೈದ್ಯೆಯೊಬ್ಬರ ಮೃತದೇಹ ಕೆರೆಯಲ್ಲಿ ಪತ್ತೆ !

0
1679

ಸಾಗರ: ವೈದ್ಯೆಯೊಬ್ಬರ ಮೃತದೇಹ ಇಲ್ಲಿನ ಗಣಪತಿ ಕೆರೆಯಲ್ಲಿ ತಡರಾತ್ರಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಜಂಬಗಾರಿನ ನಿವಾಸಿ ಡಾ. ಶರ್ಮದಾ(36) ಮೃತಪಟ್ಟ ವೈದ್ಯೆಯಾಗಿದ್ದು, ಇವರು ಸೋಮವಾರ ರಾತ್ರಿ ತಮ್ಮ ಕ್ಲಿನಿಕ್ ಬಂದ್ ಮಾಡಿಕೊಂಡು ಬೈಕಿನಲ್ಲಿ ಹೊರಟವರು ರಾತ್ರಿಯಾದರೂ ಮನೆ ತಲುಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಕೆಯ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಗಣಪತಿ ಕೆರೆ ಬಳಿ ಶರ್ಮದಾ ಅವರ ಬೈಕ್ ವಾಹನ ಪತ್ತೆಯಾಗಿತ್ತು. ತಕ್ಷಣ ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ಶರ್ಮದಾರವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರ್ಮದಾ ಅವರ ವಿವಾಹವು ಭೀಮನಕೊಣೆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿರುವ ಸುನೀಲ್ ಎಂಬುವವರ ಜೊತೆ ಕಳೆದ 08 ವರ್ಷಗಳ ಹಿಂದೆ ನೆರವೇರಿತ್ತು. ಶರ್ಮದಾ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ತಾಲೂಕು ವೈದ್ಯಾಧೀಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಜಾಹಿರಾತು

LEAVE A REPLY

Please enter your comment!
Please enter your name here