ಹೊಸನಗರ : ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 36 ವರ್ಷಗಳಿಂದ ಒಂದೇ ಕೋಮಿನ ವ್ಯಕ್ತಿಗಳು ಶಾಸಕರಾಗುತ್ತಿರುವುದು ಕ್ಷೇತ್ರದ ದುರಂತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಆಗುವುದು ನಿಶ್ಚಿತ ಎಂದು ಆಮ್ಆದ್ಮಿ ಪಕ್ಷದ ಸಂಚಾಲಕ ಅಮೃತ್ರಾಸ್ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹಿರಿಯ ವಕೀಲ ಕೆ.ದಿವಾಕರ ಅವರು ಆಮ್ಆದ್ಮಿ ಪಕ್ಷ ಸೇರ್ಪಡೆಗೊಂಡಿರುವುದು ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಿದೆ. ಅವರು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬದಲಾವಣೆಯ ನಿರೀಕ್ಷೆಯಲ್ಲಿರುವ ಕ್ಷೇತ್ರದ ಜನತೆಗೆ ತಮ್ಮ ಹಕ್ಕು ಚಲಾವಣೆಗೆ ಸಕಾಲ ಸನ್ನಿಹಿತವಾಗುತ್ತಿದೆ ಎಂದರು.
ಅವರು ಕೆ.ದಿವಾಕರ್ ಅವರು ಹಿಂದೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದರು. ರಾಜ್ಯ ಕೈಗಾರಿಕಾ ಹಣಕಾಸುಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಹೊಂದಿರುವಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ ಎಂದರು.
ತಾಲೂಕು ಅಧ್ಯಕ್ಷ ಗಣೇಶ್ ಸೋಗೋಡು ಮಾತನಾಡಿ, ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಕೋಮುವಾದ ತಾಂಡವವಾಡುತ್ತಿದೆ. ಸ್ವಚ್ಚ ಹಾಗೂ ಬಂಡವಾಳ ಶಾಹಿಗಳಲ್ಲದ, ಸಾಮಾಜಿಕ ಹಿತಚಿಂತನೆಯುಳ್ಳ ಹಲವರು ಇಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಪಕ್ಷ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಅಭಿವೃದ್ಧಿಪರ ಸರಕಾರ ಬರಬೇಕುಎನ್ನುವುದು ನಮ್ಮ ಆಶಯ ಎಂದರು.
ಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಸೆಬಾಸ್ಟಿನ್, ಹಸನಬ್ಬ, ಅರುಣ್ ಕೆರೆಕೊಪ್ಪ ಮತ್ತಿತರರು ಇದ್ದರು.
Related
You cannot copy content of this page