“ಸಾಧಕ ವಿದ್ಯಾರ್ಥಿನಿಯರು ಮಾದರಿಯಾಗಬಲ್ಲವರು, ಸಾಹಿತ್ಯವನ್ನು ಓದಿದ ವಿದ್ಯಾರ್ಥಿಗಳು ಸಮಾಜದ ನಿರ್ಮಾತೃಗಳಾಗಬಲ್ಲರು” – ರಾಜೇಶ್‌ ಕೀಳಂಬಿ

0
586

ಹೊಸನಗರ : ಸಾಧಕ ವಿದ್ಯಾರ್ಥಿನಿಯರು ಮಾದರಿಯಾಗಬಲ್ಲರು, ಸಾಹಿತ್ಯವನ್ನು ಓದಿದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಬಲ್ಲರು, ಸಮಾಜದೊಂದಿಗಿನ ಅನುಸಂಧಾನ ಅವರಿಂದ ಸಾಧ್ಯ ಹಾಗೂ ಪ್ರತೀ ಪದವಿಗೂ ತನ್ನದೇ ಆದ ಮಹತ್ವವಿದೆ ಎಂದು ರಾಜೇಶ್ ಕೀಳಂಬಿ ಹೇಳಿದರು.

ಅವರು ಇಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ ಇಲ್ಲಿನ ಕನ್ನಡ ಸಾಹಿತ್ಯ ವೇದಿಕೆ, ಸಮಾಜಶಾಸ್ತ್ರ ವೇದಿಕೆ ಹಾಗೂ ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾಹಿತ್ಯ ಮತ್ತು ಸಮಾಜ ವಿಷಯದ ಕುರಿತು ಮಾತನಾಡಿದ ಈ ವಿಷಯ ತಿಳಿಸಿದರು.

ಇದೇ ಸಮಯದಲ್ಲಿ ಪಿ.ಹೆಚ್.ಡಿ ಪದವಿ ಗಳಿಸಿದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಸೌಮ್ಯ ಕೆ.ಸಿ. ಇವರನ್ನು ಸನ್ಮಾನಿಸಲಾಯಿತು. 2019-20ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ನಡೆಸಿದ ಬಿ. ಎ. ಪದವಿಯಲ್ಲಿ 2ನೇ ರ‍್ಯಾಂಕ್ ಪಡೆದ ಅನುಷಾ ಎ.ಜಿ. ಹಾಗೂ 9ನೇ ರ‍್ಯಾಂಕ್ ಪಡೆದ ರಂಜನಿ ಹೆಚ್.ಜಿ ವಾಕೋಡ ಇವರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲರಾದ ದಿವಾಕರ ಹೆಚ್.‌ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪ್ರತಿಮಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಿಕಾ ಪ್ರಾರ್ಥಿಸಿ, ಸಂಧ್ಯಾ ನಿರೂಪಿಸಿದರು. ಗುರುಮೂರ್ತಿ ಎಂ.ಜಿ. ವಂದಿಸಿದರು.

ಐ.ಕ್ಯೂ.ಎ.ಸಿ. ಸಂಚಾಲಕರಾದ ಮಂಜುನಾಥ ಡಿ., ಕನ್ನಡ ಮತ್ತು ಸಮಾಜಶಾಸ್ತ್ರ ಉಪನ್ಯಾಸಕರು ಹಾಜರಿದ್ದರು.

ವರದಿ: ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here