ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಇಲ್ಲವಾದರೆ ದಂಡ ಗ್ಯಾರಂಟಿ: ತಹಶೀಲ್ದಾರ್ ವಿ.ಎಸ್‌. ರಾಜೀವ್

0
519

ಹೊಸನಗರ: ದೇಶದಲ್ಲಿ ಕೊರೊನಾದ 2ನೇ ಅಲೆ ಅಬ್ಬರವಾಗುತ್ತಿದೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರದ ಮಾರ್ಗಸೂಚಿಯಂತೆ ಮನೆಯಿಂದ ಹೊರಬರುವ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಮನೆಯಿಂದ ಹೊರ ಬರಬೇಕು ಮತ್ತು ತಾವು ವ್ಯವಹರಿಸುವ ಜಾಗದಲ್ಲಿ ಸಾಮಾಜಿಕ ಅಂತರದಿಂದ ವ್ಯವಹರಿಸಬೇಕೆಂದು ಹೊಸನಗರದ ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಹೇಳಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸದಿದ್ದರೆ ಹಾಗೂ ಸಾಮಾಜಿಕ ಅಂತರದಿಂದ ವ್ಯವಹರಿಸದಿದ್ದರೆ ದಂಡ ಗ್ಯಾರಂಟಿ ಎಂದು ಖಡಕ್ ಎಚ್ಚರಿಕೆ ಹೊಸನಗರ ತಾಲ್ಲೂಕಿನ ಜನರಿಗೆ ನೀಡಿದ್ದಾರೆ.

ತಾಲ್ಲೂಕು ಕಛೆರಿಯಲ್ಲಿ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಮದುವೆ ಸಮಾರಂಭಗಳಲ್ಲಿ 100 ಕ್ಕಿಂತಲೂ ಹೆಚ್ಚು ಜನರನ್ನು ಸೇರಿಸಬಾರದು ಹೊಸನಗರ ತಾಲ್ಲೂಕಿನ ಪ್ರತಿಯೊಬ್ಬರು ಅಂಗಡಿಯ ಮಾಲೀಕರು ಮಾಸ್ಕ್ ಹಾಕಿಕೊಂಡು ವ್ಯವಹರಿಸಬೇಕು ಬಂದ ಸಾರ್ವಜನಿಕರಿಗೆ ಸಾಮಾಜಿಕ ಅಂತರದಿಂದ ವ್ಯವಹರಿಸಲು ತಿಳಿಸಬೇಕು ಇಲ್ಲವಾದರೆ ಅಂಗಡಿಯ ಮಾಲೀಕರ ಮೇಲೂ ದಂಡ ಹಾಗೂ ಕೇಸು ಹಾಕಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸಂಖ್ಯೆ ಹೆಚ್ಚುತ್ತಿದ್ದು ಏಪ್ರಿಲ್ 1ರಿಂದ 15ರವರೆವಿಗೆ ವಿಪರೀತ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅದರಲ್ಲಿಯು ಹೊಸನಗರ ತಾಲ್ಲೂಕಿನಲ್ಲಿ ಏಪ್ರಿಲ್ 1ರಿಂದ 15ರವರೆವಿಗೆ ಸುಮಾರು 30 ಕೊರೊನಾ ಕೇಸು ಪತ್ತೆಯಾಗಿದೆ ಜನರು ಭಯಭೀತರಾಗುವತ್ತ ಸಾಗಿದ್ದಾರೆ. ಯಾರು ಭಯಭೀತರಾಗುವುದು ಬೇಡ‌. ಅಗತ್ಯ ತೊಂದರೆಯಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಬರುವಾಗ ಪ್ರತಿಯೊಬ್ಬರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಮನೆಯಿಂದ ಹೊರಬನ್ನಿ. ಸರ್ಕಾರ 1ರಿಂದ 9ನೇ ತರಗತಿಯವರೆವಿಗೆ ಶಾಲೆಗಳನ್ನು ರಜೆ ಗೋಷಿಸಲಾಗಿದ್ದು ಈ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಸರ್ಕಾರಿ ಶಾಲೆಗಳು ಸರ್ಕಾರದ ಆದೇಶ ಪಾಲಿಸುತ್ತಿದ್ದು ಖಾಸಗಿ ಶಾಲೆಯವರು ಹಣಕ್ಕಾಗಿ ವಿದ್ಯಾರ್ಥಿಗಳ ಪೋಷಕರನ್ನು ಪೀಡಿಸುತ್ತಿರುವ ಬಗ್ಗೆ ವರದಿಗಳು ಬರುತ್ತಿದೆ 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರಿ ಅಥವ ಖಾಸಗಿ ಶಾಲೆಗಳಲ್ಲಿ ಸರ್ಕಾರದ ಸೂತ್ತೋಲೆ ಬರುವವರೆವಿಗೆ ಯಾವುದೇ ಪರೀಕ್ಷೆಗಳನ್ನು ನಡೆಸುವ ಹಾಗಿಲ್ಲ ನಡೆಸಿದ್ದೇ ಅದಲ್ಲಿ ವಿದ್ಯಾರ್ಥಿಗಳ ಪೋಷಕರು ಡೋನೇಶನ್ ಪಡೆದ ಬಗ್ಗೆ ದೂರು ನೀಡಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶೀರಾಸ್ಥೆದಾರ್‌ಗಳಾದ ಸುಧೀಂದ್ರ ಕುಮಾರ್, ಶ್ರೀಕಾಂತ್ ಹೆಗ್ಡೆ, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ಗ್ರಾಮ ಲೆಕ್ಕಿಗರಾದ ರೇಣುಕಯ್ಯ, ನವೀನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here