ಸಾಮಾನ್ಯರ ಜಗತ್ತಿನ ವಿಶಿಷ್ಟ ಸಂಗತಿಗಳ ‘ಮಾಯಾಲೋಕ’

0
211

ಮೂಡಿಗೆರೆ: ಸಾಮಾನ್ಯ ಪಾತ್ರಗಳನ್ನೆ ಪಾತ್ರವಾಗಿಸಿ ಸಾಮಾನ್ಯರ ಜಗತ್ತಿನೊಳಗಿನ ವಿಶಿಷ್ಟ ಸಂಗತಿಗಳನ್ನು ತೆರೆದಿಡುವುದು ಮಾಯಾಲೋಕ ಕೃತಿಯ ವೈಶಿಷ್ಟ್ಯವಾಗಿದೆ ಎಂದು ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಹೇಳಿದರು.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಮಾಯಾಲೋಕ: 1 ಕೃತಿಯ ಬಗ್ಗೆ ಮಾತನಾಡಿ, ಸಾಮಾನ್ಯ ಪಾತ್ರಗಳ ಮೂಲಕ ವಿಶಿಷ್ಟ ಜಗತ್ತನ್ನು ತೆರೆದಿಡುವ ಕೃತಿ ಮಾಯಾಲೋಕ, ತರಕಾರಿ ಮಾರುವವರು, ಮಾಂಸದಂಗಡಿಯವರು, ರಿಪೇರಿ ಅಂಗಡಿಯವರು, ಪ್ರಕೃತಿಯ ಬದಲಾವಣೆಗಳು ಮನುಷ್ಯ ಬದುಕಿನ ಮೇಲೆ ಬೀರುವ ಪರಿಣಾಮಗಳನ್ನು ಕಥನ ಕಲೆಯ ಮೂಲಕ ಕಲಾತ್ಮಕವಾಗಿ ತೇಜಸ್ವಿಯವರು ಈ ಕೃತಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿ ಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ಗಮನ ಹರಿಸಿ ಹೊಸ ದಿಗಂತಗಳತ್ತ ಅನ್ವೇಷಿಸುವ ಅಗತ್ಯತೆಯ ಬಗ್ಗೆ ತೇಜಸ್ವಿ ಅವರು ಕೃತಿಯ ಮುನ್ನಡಿಯಲ್ಲಿ ವಿವರಿಸಿದ್ದಾರೆ ಎಂದರು.

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಲೇಖಕರಾದ ಪೂರ್ಣೆಶ್ ಮತ್ತಾವರ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here