20.6 C
Shimoga
Friday, December 9, 2022

ಸಾಮಾನ್ಯ ನಾಗರೀಕನಂತೆ ರಾತ್ರಿ ವೇಳೆ ಬೈಕ್ ನಲ್ಲಿ ತೆರಳಿ ತೆರವಿನ ಕಾರ್ಯಾಚರಣೆ ವೀಕ್ಷಿಸಿದ ಆಯುಕ್ತರು !

ಶಿವಮೊಗ್ಗ : ಬುಧವಾರ ಬೆಳಿಗ್ಗೆ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆ ಪ್ರವಾಸಿ ಮಂದಿರ, ಮಲೆನಾಡಸಿರಿ, ಆಯನೂರು ಗೇಟ್, ದ್ವಾರಕ ಕನ್ವೆನ್ಸಲ್ ಹಾಲ್ ಎದುರು, ಭಾರ್ಗವಿ ಪೆಟ್ರೋಲ್ ಬಂಕ್, ಎಪಿಎಂಸಿ, ಆಲ್ಕೋಳ ಸರ್ಕಲ್, ಹೊಸಮನೆ ಇನ್ನೂ ಹಲವು ಕಡೆ, ಪಾಲಿಕೆ ಸಿಬ್ಬಂದಿಗಳಿಂದ ಪುಟ್ ಪಾತ್ ಹಾಗೂ ರಸ್ತೆ ಅಕ್ರಮಿಸಿಕೊಂಡವರ ತೆರವು ಕಾರ್ಯಾಚರಣೆ ಮುಂದುವರೆದಿದೆ.

ಪಾಲಿಕೆ ಸಿಬ್ಬಂದಿಗಳು ತೆರವು ಮಾಡಿ ಹೋದ ನಂತರ ಹಾಗೂ ಮಧ್ಯಾಹ್ನ ಅವರ ಕರ್ತವ್ಯ ಮುಗಿದ ನಂತರ ಪುನಃ ಸಂಜೆಯ ಮೇಲೆ ತಮ್ಮ ಸಾಮಾಗ್ರಿಯ ರಸ್ತೆಗೆ ಹರಡಿ ವ್ಯಾಪಾರ ಮಾಡತೊಡಗಿದರ ವೀಕ್ಷಣೆಗೆ ಸ್ವತಃ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ರವರು ರಾತ್ರಿಯ ವೇಳೆ ಸಾಮಾನ್ಯ ನಾಗರೀಕರಂತೆ ಬೈಕ್ ನಲ್ಲಿ ನಗರದ ಎಲ್ಲಾ ಕಡೆ ಸುತ್ತುತ್ತಾ ರಸ್ತೆಗೆ ಹರಡಿ ವ್ಯಾಪಾರ ಮಾಡುತ್ತಿರುವರನ್ನು ಕಂಡು ರಾತ್ರಿಯು ಪಾಲಿಕೆ ಸಿಬ್ಬಂದಿಗಳನ್ನು ಕರೆಯಿಸಿ ಅಂಗಡಿಯ ಮಾಲೀಕರ ಲೈಸೆನ್ಸ್ ರದ್ದು ಮಾಡಲು ಹಾಗೂ ಬೀದಿಬದಿ ವ್ಯಾಪಾರಗಳ ಸಾಮಾಗ್ರಿಯ ವಶಪಡಿಸಿಕೊಳ್ಳಲು ತಿಳಿಸಿದ್ದಾರೆ‌.

ನಿನ್ನೆಯ ರಾತ್ರಿಯ ವೇಳೆ ನಗರವನ್ನು ಸುತ್ತು ಹೊಡೆಯುತ್ತಾ ಆಲ್ಕೋಳ ಸರ್ಕಲ್ ಗೆ ಸಾಮಾನ್ಯ ನಾಗರೀಕರಂತೆ ಬೈಕ್ ನಲ್ಲಿ ಬಂದು ನಿಂತರು. ಬೀದಿಬದಿಯ ತಿಂಡಿ ತಿನಿಸು ವ್ಯಾಪಾರಿಯು ಸರ್ ಏನೂ ಬೇಕು ಸರ್ ಎಂದು ಕೇಳಿದರಂತೆ ಪುಟ್ ಪಾತ್ ಗೆ ಹರಡಿದ ಅಷ್ಟು ಸಾಮಗ್ರಿ ಬೇಕು ಎಂದಾಗ, ವ್ಯಾಪಾರಿ ಮಾಲೀಕರಿಗೆ ಕರೆದಾಗ ಮಾಲೀಕ ಬಂದು ನೋಡಿ ಗಾಬರಿಯಾದರು ಎದುರಿಗೆ ನಿಂತವರು ಸಾಮಾನ್ಯ ಗ್ರಾಹಕನಲ್ಲ ಅವರು ನಗರದ ಆಯುಕ್ತರು ಎಂದು.

ವ್ಯಾಪಾರಿಗಳು ನಗರದ ಸ್ವಚ್ಛತೆ ಕಾಪಾಡಬೇಕು, ತ್ಯಾಜ್ಯಾವನ್ನು ಘಂಟೆಗಾಡಿಗೆ ಹಾಕಿ ವ್ಯಾಪಾರದ ಸ್ಥಳ ಸದಾ ಸ್ವಚ್ಛತೆ ಇರಬೇಕು. ರಾತ್ರಿ ಹತ್ತರ ಒಳಗೆ ವ್ಯಾಪಾರ ವಹಿವಾಟು ಬಂದ್ ಮಾಡಬೇಕು. ಏಫ್ರಾನ್ ಧರಿಸಬೇಕು. ಬೀದಿಬದಿಯ ಗುರುತಿನ ಚೀಟಿ ಹಾಗೂ ಆಹಾರ ಸುರಕ್ಷತೆ ಪ್ರಮಾಣ ಪತ್ರ, ಅಧಿಕಾರಿಗಳಿಗೆ ಕಾಣುವಂತೆ ಇಡಬೇಕು ಕಾರ್ಡ್‌ನಲ್ಲಿ ಇರುವ ವ್ಯಾಪಾರಿ ಮಾತ್ರ ಪಾಲಿಕೆ ನೀಡಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಪುಟ್ ಪಾತ್‌. ಆಕ್ರಮಿಸಿಕೊಳ್ಳಬಾರದು ಎಂದು ಆಲ್ಲೋಳ ವೃತ್ತದಿಂದ ವಿಶಾಲ್ ಮಾರ್ಟ್, ಗೋಪಾಳ ವೃತ್ತದ ವ್ಯಾಪಾರಿಗಳಿಗೆ ಎಚ್ಚರಿಗೆ ನೀಡಿದರು. ಈ ವೇಳೆಯಲ್ಲಿ ಪಾಲಿಕೆ ಅಧಿಕಾರಿ ವರ್ಗದವರು ಹಾಗೂ ಬೀದಿಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!