ಸಾರಿಗೆ ನೌಕರರ ಪತ್ನಿಯರಿಂದ ಬಸ್ ನಿಲ್ಲಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನ..!

0
567

ಚಿಕ್ಕಮಗಳೂರು: 6ನೇ ವೇತನ ಜಾರಿಗೊಳಿಸಲು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಇಂದು ಅವರ ಪತ್ನಿಯರು ತಂಟೆ, ಲೋಟ ಬಡಿದು ಪ್ರತಿಭಟನೆ ನಡೆಯುವ ಮೂಲಕ ಭಾಗವಹಿಸಿ‌ ಕೆ.ಎಸ್.ಆರ್.ಟಿ.ಸಿ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲು ಬಂದಾಗ ಅದೇ ಸಂದರ್ಭದಲ್ಲಿ ಮೂಡಿಗೆರೆ ಮತ್ತು ಕಡೂರಿನಿಂದ ಬಂದ ಸಾರಿಗೆ ಬಸ್ ಗಳ ಚಾಲಕರ ಮೇಲೆ ಏಕಾಏಕಿ ಸುಮಾರು 150 ಮಹಿಳೆಯರು ಹಲ್ಲೆ ಮಾಡಲು ಮುಂದಾಗಿದ್ದಾರೆ. ತಕ್ಷಣ ಸಾರ್ವಜನಿಕರು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ ಚಾಲಕನನ್ನು ರಕ್ಷಿಸಿರುವ ಘಟನೆ ನಡೆದಿದೆ.

ನಂತರ ಮಾತನಾಡಿದ ಮಹಿಳೆಯರು, ಸಾರಿಗೆ ನೌಕರರಿಗೆ ಬರುತ್ತಿರುವ ಸಂಬಳದಲ್ಲಿ ಸಂಸಾರ ನಡೆಸಲು ಆಗುತ್ತಿಲ್ಲ. ಸರ್ಕಾರ ತನ್ನ ಹಟ್ಟಮಾರಿತನವನ್ನು ಬಿಟ್ಟು ನೌಕರರಿ ಅನೂಕುಲವನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಕುಟುಂಬದ ಸದಸ್ಯರು ಎಲ್ಲರು ಸೇರಿದಂತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here