ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಇಂದು ಜಿಲ್ಲೆಯಾದ್ಯಂತ ಸರ್ಕಾರಿ ಬಸ್ಗಳು ಸಂಚರಿಸಲಿಲ್ಲ. ಪ್ರಯಾಣಿಕರು ಖಾಸಗಿ ಬಸ್ ಗಳಿಗೆ ಮುಗಿಬಿದ್ದ ಘಟನೆ ಇಂದು ನಡೆಯಿತು.
ಸರ್ಕಾರಿ ಬಸ್ ನಿಲ್ದಾಣಗಳಿಂದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಖಾಸಗಿ ಬಸ್ಗಳಿಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅವಕಾಶ ನೀಡಲಾಗಿತ್ತು. ಹಾಗಾಗಿ ಅನೇಕ ಖಾಸಗಿ ಬಸ್ಗಳುಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದಲೇ ಸಂಚಾರ ಬೆಳೆಸಿದವು. ಆದರೂ ಕೂಡ ಮುಷ್ಕರದ ಹಿನ್ನಲೆ ಮೊದಲೇ ಗೊತ್ತಿದ್ದರಿಂದ ಪ್ರಯಾಣ ಕರ ಸಂಖ್ಯೆಯೇ ಕಡಿಮೆಯಾಗಿದ್ದು ಕಂಡು ಬಂದಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಡಿಪೋದ ಅಧಿಕಾರಿ ಸಿದ್ದೇಶ್, ಬೆಳಗ್ಗಿನಿಂದ ಸರ್ಕಾರಿ ಬಸ್ಗಳು ಸಂಚಾರ ಮಾಡುತ್ತಿಲ್ಲ. ನಮ್ಮ ವಿಭಾಗ ಅಲ್ಲದೆ ಬೇರೆ ಬೇರೆ ವಿಭಾಗಗಳಿಂದಲೂ ಕೂಡ ಬಸ್ಗಳು ನಿಲ್ದಾಣಕ್ಕೆ ಬರುತ್ತಿಲ್ಲ. ಯಾರೂ ಕೆಲಸಕ್ಕೆ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಅನೇಕ ಡ್ರೈವರ್ ಮತ್ತು ಕಂಡೆಕ್ರ್ಗಳ ಮನವೊಲಿಸಲಾಗಿದೆ. ಅವರಿರುವ ರೂಂಗಳಿಗೆ ಹೋಗಿ ಕರೆಯಲಾಗಿದೆ. ಆದರೂ ಕೂಡ ಅವರು ಬಂದಿಲ್ಲ. ಹೀಗಾಗಿ ಇಂದು ಸಂಪೂರ್ಣವಾಗಿ ಸರ್ಕಾರಿ ಬಸ್ಗಳು ಸ್ಥಗಿತಗೊಂಡಿವೆ ಎಂದರು.

ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸುಮಾರು 1300 ಬಸ್ಗಳು ಬರುತ್ತವೆ ಮತ್ತು ಹೊರಡುತ್ತವೆ. ಆದರೆ ಇಂದು ಯಾವ ಬಸ್ಗಳು ಬಂದಿಲ್ಲ. ಅಲ್ಲದೆ ಖಾಸಗಿ ಬಸ್ಗಳಿಗೆ ಇಲ್ಲಿ ಅವಕಾಶ ಕೊಡಲಾಗಿದೆ. ಇದಲ್ಲದೆ ಸರ್ಕಾರ ಕೆಲವು ಖಾಸಗಿ ಟ್ಯಾಕ್ಸಿಗಳಿಗೂ ಕೂಡ ಅವಕಾಶ ಕೊಟ್ಟಿರುವುದರಿಂದ ಪ್ರಯಾಣ ಕರು ಕಡಿಮೆ ಇರುವುದರಿಂದ ಹೆಚ್ಚಿನ ತೊಂದರೆಯಾಗಿಲ್ಲ ಆದರೆ ಮುಷ್ಕರ ಮುಂದುವರೆದರೆ ಖಂಡಿತ ಪ್ರಯಾಣ ಕರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.
ಖಾಸಗಿ ಬಸ್ಗಳ ಸಂಚಾರ ಎಂದಿನಂತಿತ್ತು. ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಸಂಚಾರ ಇರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡುವ ಪ್ರಯಾಣಕರಿಗೆ ಸಮಸ್ಯೆಯಾಗಲಿಲ್ಲ. ಆದರೆ ಹೊರ ಜಿಲ್ಲೆಗಳಿಗೆ ತೆರಳಲು ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದ ಕೆಲವು ಪ್ರಯಾಣ ಕರಿಗೆ ತೊಂದರೆಯಾಗಿತ್ತು. ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ ಸರ್ಕಾರ 8 ಬೇಡಿಕೆ ಈಡೇರಿಸಿದೆ. ಸಾರಿಗೆ ನೌಕರರು ಹಠಮಾಡಿ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರ ಕೈ ಬಿಟ್ಟು ಸೇವೆಗೆ ಮರಳಬೇಕೆಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಮನವಿ ಮಾಡಿಕೊಂಡಿ ದ್ದರೂ ಸಹ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ಇಸ್ಟ್ವೆಸ್ಟ್ ಸಂಸ್ಥೆಯ ಬಸ್ ಒಂದು ಬೆಂಗಳೂರಿಗೆ ಹೊರಟು ನಿಂತಿತ್ತು. ಪೊಲೀಸರು ಬಸ್ನ್ನು ನಿಲ್ಲಿಸದಂತೆ ಸೂಚನೆ ನೀಡಿದರು. ಆದರೆ ಮಾಲೀಕ ತಲ್ಕಿನ್ ಅಹಮ್ಮದ್ ಅವರು ಜಿಲ್ಲಾಡಳಿತವೆ ಬಸ್ ಸಂಚರಿಸಲು ಅನುಮತಿ ನೀಡಿದೆ. ಆದರೆ ನೀವೇಕೆ ಕಿರುಕುಳ ನೀಡುತ್ತಿದ್ದೀರಿ ಇದು ಸರಿಯಲ್ಲ. ಸಾರ್ವಜನಿಕರ ಹಿತದೃಷ್ಠಿಯಿಂದ ನಾವು ಬಸ್ ಬಿಟ್ಟಿದ್ದೇವೆ ಎಂದು ಸಮಜಾ ಯಿಷಿ ನೀಡಿದರು.
