ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ; ಬೈಕ್ ಸವಾರನಿಗೆ ಗಂಭೀರ ಗಾಯ !

0
533

ಚಿಕ್ಕಮಗಳೂರು : ನಗರದ ದಂಟರಮಕ್ಕಿ ಕೆರೆ ಏರಿ ಮೇಲೆ ನಿನ್ನೆ ರಾತ್ರಿ 8.30ರ ಸಮಯದಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೆರೆ ಏರಿ ಮೇಲೆ ರಸ್ತೆ ಕಾಮಗಾರಿ ನಡೆಯುತ್ತಿದ್ದು ಎಲ್ಲಾ ವಾಹನಗಳು ಏಕಮುಖ ಸಂಚಾರದಿಂದಲೇ ಅಪಘಾತ ಸಂಭವಿಸಿ ಎನ್ನಲಾಗಿದೆ.

ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ಧಾವಿಸಿದ ಸ್ಥಳೀಯರು ಮತ್ತು ಇತರೆ ವಾಹನ ಸವಾರರು ಅಪಘಾತ ಸಂಭವಿಸಿದ ಬೈಕ್ ಸವಾರನನ್ನು ಮೇಲಕ್ಕೆತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬಸ್ಸಿಗೆ ಬೈಕ್ ಗುದ್ದಿದ ಪರಿಣಾಮ ‌ಬಸ್ಸಿನ ಮುಂಭಾಗ ಜಖಂಗೊಂಡಿದೆ. ಬೈಕ್ ಚಾಲಕನ ಹಣೆ ಹಾಗೂ ತಲೆಯ ಭಾಗಕ್ಕೆ ತೀವ್ರತರವಾದ ಗಾಯಗಳಾಗಿವೆ.

ಅಪಘಾತಕ್ಕೆ ಒಳಗಾದವರು ಯಾರೆಂಬ ಮಾಹಿತಿ ಇಲ್ಲದ ಕಾರಣ ಸಂಬಂಧಿಕರನ್ನು ಸಂಪರ್ಕಿಸುವುದು ಕಷ್ಟವಾಗಿದ್ದು ಯಾರಾದರು ಸಂಬಂಧಿಗಳು, ಸ್ನೇಹಿತರು ಪರಿಚಯ ಇದ್ದಲ್ಲಿ ಕೂಡಲೇ ಚಿಕ್ಕಮಗಳೂರುನ ಸರ್ಕಾರಿ ಆಸ್ಪತ್ರೆಗೆ ಬರುವಂತೆ ಕೋರಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here