“ಸಾರ್ಥಕ ಬದುಕಿಗೆ ಶರಣರ ಆದರ್ಶಗಳು ಮಾರ್ಗದರ್ಶಿ”: ಮುರುಘಮಠದ ಶ್ರೀಗಳು

0
160

ರಿಪ್ಪನ್‌ಪೇಟೆ : ಇಂದಿನ ದಿನಮಾನಗಳಲ್ಲಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ಸೇರಿಸುವ ಸಂಸ್ಕೃತಿಯಿಂದಾಗಿ ಯುವ ಜನಾಂಗ ಕೃತಿಮರಾಗುತ್ತಿದ್ದಾರೆ. ಆದರೆ ಮನೆಯಲ್ಲಿ ತಂದೆ ತಾಯಿಗಳು ಗುರು ಹಿರಿಯರ ಮಾರ್ಗದರ್ಶನದಿಂದಾಗಿ ಸುಸಂಸ್ಕೃತ ಕುಟುಂಬ ನಿರ್ಮಾಣವಾಗವುದರೊಂದಿಗೆ ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿತ್ವ ರೂಡಿಸಿಕೊಂಡು ಸಾರ್ವಜನಿಕ ಬದುಕಿನಲ್ಲಿ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಆನಂದಪುರ ಮುರಾಘಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಇತ್ತೀಚೆಗೆ ಲಿಂಗೈಕರಾದ ಹಿರಿಯ ಜೀವಿ ಜಂಬಳಿ ಷಣ್ಮಖಪ್ಪಗೌಡರ ಸ್ವಗೃಹದಲ್ಲಿ ಲಿಂಗೈಕ ಜೆ.ಎನ್.ಎಸ್ ರವರ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ತುಂಬು ಕುಟುಂಬದಲ್ಲಿ ಶಿಸ್ತಿನ ವ್ಯಕ್ತಿಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ನೀಡಿ ಸಮಾಜದಲ್ಲಿ ಉತ್ತಮರಾಗಿರುವ ತಮ್ಮ 99 ವರ್ಷ ಪೂರೈಸಿದ ಲಿಂಗೈಕ ಜೆ.ಎನ್.ಷಣ್ಮುಖಪ್ಪಗೌಡರು ಸಮಾಜಕ್ಕೆ ಮತ್ತು ಮಠಗಳಿಗೆ ಆಸ್ತಿಯಾಗಿದ್ದರು ಅವರ ಆದರ್ಶ ಬದುಕು ನಮಗೆ ಸ್ಪೂರ್ತಿಯಾಗಿದ್ದವು ಎಂದರು.

ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾದ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಈ ಸಂದೃರ್ಭದಲ್ಲಿ ಜನಜಾಗೃತಿ ಹೋರಾಟ ಸಮಿತಿಯ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ, ಸಾಗರ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ, ದಾವಣಗೆರೆಯ ಮಾಜಿ ಉಪಮೇಯರ್ ಬಿ.ಲೋಕೆಶಪ್ಪ, ಜೆ.ಜಿ.ಸದಾನಂದ ಜಂಬಳ್ಳಿ, ಕೋಕಿಲ ಚೋರಡಿ, ಜೆ.ಎಸ್.ಚಂದ್ರಪ್ಪ, ಜೆ.ಎಸ್.ಗಂಗಾಧರ, ಹಾಲಸ್ವಾಮಿಗೌಡರು ಬೆಳಕೋಡು, ಎಂ.ಎಸ್.ಬಾಲಗಂಗಾಧರಪ್ಪಗೌಡರು, ಹುಳಿಗದ್ದೆ ನಾಗೇಂದ್ರಪ್ಪಗೌಡ ಇನ್ನಿತರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಜೆ.ಎಸ್.ಚಂದ್ರಪ್ಪ ಸ್ವಾಗತಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here