ಸಾರ್ವಜನಿಕರ ಗಮನಸೆಳೆಯುತ್ತಿದೆ ಶತಮಾನದಷ್ಟು ಹಳೆಯ ಬೃಹತ್ ಮನೆಯಲ್ಲಿನ ವಿಭಿನ್ನ ಶೈಲಿಯ ಹೋಟೆಲ್ !

0
456

ಮೂಡಿಗೆರೆ: ಸುಮಾರು ನೂರು ವರ್ಷದಷ್ಟು ಹಳೆಯದಾದ ಮನೆ, ಒಳಗೆ ಹೋದಂತೆ ಅನೇಕ ಕೋಣೆಗಳು, ಗಟ್ಟಿಮುಟ್ಟಾದ ಬಾಗಿಲು, ಕಿಟಕಿಗಳು, ಮರದ ಹಲಗೆಯಿಂದ ಮಾಡಿದ ಮಾಳಿಗೆ, ಕೋಣೆಗಳಲ್ಲಿ ಮಿನುಗುವ ಬಣ್ಣಬಣ್ಣದ ಬೆಳಕಿನ ಬಲ್ಬ್ ಗಳು ಗೋಡೆಗಳಲ್ಲಿ ಚಿತ್ತಾರ.

ಇಂತಹ ವಿಭಿನ್ನ ಶೈಲಿಯ ಹೋಟೆಲಿನಲ್ಲಿ ಕುಳಿತು ಭೋಜನ ಮಾಡುವ ಗ್ರಾಹಕರಿಗೆ ವಿಶೇಷ ಅನುಭವ ಉಂಟಾಗುತ್ತದೆ. ಹಳೇ ಕಾಲದ ಮನೆಯಾಗಿರುವುದರಿಂದ ಫ್ಯಾನ್ ಅಥವಾ ಎಸಿ ಇಲ್ಲದಿದ್ದರೂ ಒಳಗೆ ತಣ್ಣನೆಯ ವಾತಾವರಣ. ಯಾರೇ ಆದರೂ ಇಲ್ಲಿಗೆ ಭೇಟಿ ನೀಡಿದರೆ ಅಬ್ಬಾ..! ಇಂತಹ ಮಾದರಿಯಲ್ಲೂ ಹೋಟೆಲ್ ಮಾಡಿದ್ದಾರಲ್ಲವೇ ಎಂದು ಹುಬ್ಬೇರಿಸದೇ ಇರಲಾರರು.

ಕಾಫಿನಾಡಿಗೆ ಹೇಳಿ ಮಾಡಿಸಿದ ವಿಶೇಷ ಶೈಲಿಯಲ್ಲಿ ಮೂಡಿಗೆರೆಯ ಖಲೀಲ್ ʼಖಲೀಲ್ಸ್ ಕಿಚನ್ʼ ಹೆಸರಿನಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಮೊದಲ ದಿನವೇ ಸಾಕಷ್ಟು ಗ್ರಾಹಕರು ಭೇಟಿ ನೀಡಿದ್ದರು. ದಿನದಿಂದ ದಿನಕ್ಕೆ ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಮಲೆನಾಡು ಮತ್ತು ಕರಾವಳಿಯ ವಿಶೇಷ ಖಾದ್ಯಗಳು ಇಲ್ಲಿದ್ದು ಗ್ರಾಹಕರ ಬಾಯಿಯನ್ನು ಚಪ್ಪರಿಸುತ್ತೇವೆ.

ಮೂಡಿಗೆರೆಯ ಆಜಾದ್ ರಸ್ತೆಯಲ್ಲಿ ಆರಂಭಿಸಿರುವ ಖಲೀಲ್ಸ್ ಕಿಚನ್ ಹೋಟೆಲ್‌ಅನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್ ಉದ್ಘಾಟಿಸಿದರು. ತಾಪಂ ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಪಪಂ ಉಪಾಧ್ಯಕ್ಷ ಸುಧೀರ್, ವೆಂಕಟೇಶ್ ಮತ್ತಿತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here