ಸಾಲದ ಸೋಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ದಂಪತಿಗಳ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

0
756

ತೀರ್ಥಹಳ್ಳಿ: ಅಡಿಕೆ ಚೇಣಿ (ಕೇಣಿ) ವಹಿವಾಟಿನಲ್ಲಿ ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸಿ ಸಾಲಗಾರರ ಕಾಟಕ್ಕೆ ಬೇಸತ್ತು ತಮ್ಮ ಅಮೂಲ್ಯವಾದ ಜೀವವನ್ನೆ ಬಲಿಕೊಟ್ಟ ಸಂತೆಹಕ್ಲು ಪೂರಲಕೊಪ್ಪದ ದಂಪತಿಗಳಾದ ಉಷಾ ಹಾಗೂ ಮಂಜುನಾಥ್ ‌ರವರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರರವರು ಭೇಟಿ ನೀಡಿ ಕುಟುಂಬದ ಸದಸ್ಯರುಗಳಾದ ಮಂಜುನಾಥ್ ‌ರವರ ತಾಯಿ ಲೀಲಾವತಿ ಹಾಗೂ ಮಕ್ಕಳಾದ ಅಕ್ಷಯ, ಆಶ್ರಿತಾರವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.

ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಸಾಲಗಾರರು ಬಂದು ಹಣ ಕೊಡುವ ಬಗ್ಗೆ ತಕರಾರು ತೆಗೆದರೆ ನಮಗೆ ತಿಳಿಸಿ ಸಾಲೇಕೊಪ್ಪ ರಾಮಚಂದ್ರರವರು ನಿಮ್ಮೊಡನೆ ವಿಶೇಷ ಸಂಪರ್ಕದಲ್ಲಿರುತ್ತಾರೆ ಜೀವನದಲ್ಲಿ ಧೃತಿಗೆಡದೆ ಜೀವನ ಸಾಗಿಸಿ ಎಂದು ಆತ್ಮ ಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಕುಕ್ಕೆ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ರಶ್ಮಿ ಶ್ರೀಕಾಂತ್ ನಾಯಕ್
ಜಾಹಿರಾತು

LEAVE A REPLY

Please enter your comment!
Please enter your name here