ಸಾವಂತೂರು ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ

0
215

ಹೊಸನಗರ : ತಾಲೂಕಿನ ಮುಂಬಾರು ಪಂಚಾಯತಿಯ ಸಾವಂತೂರಿನ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಚನ್ನಬಸವೇಶ್ವರ ದೇವರಿಗೆ ಚರಾಷ್ಟಬಂಧ, ಜೀವ ಕುಂಭಾಭಿಷೇಕ, ಕಲಾತತ್ವ ಅಧಿವಾಸ ಹವನ, ಶಾಂತಿ ಪ್ರಾಯಶ್ಚಿತ್ತ ಹೋಮ, ಮಹಾಪೂರ್ಣಾಹುತಿ, ಶ್ರೀದೇವರ ಕಲಶಾಭಿಷೇಕ ಮಹಾಪೂಜೆ ಕಾರ್ಯಕ್ರಮಗಳು ಇಂದು ನೆರವೇರಿತು.

ಸಾಗರದ ಶ್ರೀ ಪರಮೇಶ್ವರ ಭಟ್ಟರು ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಶ್ರೀ ದೇವರಿಗೆ ಫಲ ಸಮರ್ಪಣೆ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ ಪ್ರಧಾನ, ಸಂಕಲ್ಪ ರುತ್ತ್ವಿಗರ್ಣ, ಬಿಂಬ ಶುದ್ಧಿ ಹವನ, ಬ್ರಹ್ಮ ಕೂರ್ಚ ಹವನ, ವಾಸ್ತು ರಕ್ಷೋಘ್ನ ಹವನ, ವಾಸ್ತು ಬಲಿ ಆಲಯ ಶುದ್ದಿಲಯ ನೆರವೆರಿಸಲಾಯಿತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಹಾಗೂ ಆಸುಪಾಸಿನ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here