ಸಾವಯವ ಕೃಷಿಯಿಂದ ಹೆಚ್ಚಿನ ಉತ್ಪಾದನೆ ಸಾಧ್ಯ

0
212

ರಿಪ್ಪನ್‌ಪೇಟೆ: ರೈತರು ಸಾವಯವ ಗೊಬ್ಬರ ಬಳಕೆಯಿಂದಾಗಿ ಹೆಚ್ಚಿನ ಉತ್ಪಾದನೆ ಹೊಂದಲು ಸಾಧ್ಯವೆಂದು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‌ಗೌಡ ಹೇಳಿದರು.


ರಿಪ್ಪನ್‌ಪೇಟೆಯ ಗವಟೂರು ಗ್ರಾಮದ ಪ್ರಗತಿ ಪರ ರೈತ ಈಶ್ವರಪ್ಪ ಗೌಡರ ಮನೆಯಲ್ಲಿ ಗುರುವಾರ ಧರ್ಮಪಾಲ್ ಸತ್ಯಪಾಲ್ ಗ್ರೂಪ್ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ರಿಪ್ಪನ್‌ಪೇಟೆ ರೈತ ಉತ್ಪಾದನಾ ಕಂಪನಿ ಇವರ ಸಹಯೋಗದಲ್ಲಿ ಆಯೋಜಿಸಲಾದ ಜೀವನೋಪಾಯದ ವರ್ಧನೆಗಾಗಿ ಸುಸ್ಥಿರ ಮತ್ತು ಸಮಗ್ರ ಕೃಷಿ ಯೋಜನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಕಂಪನಿಯ ಗೊಬ್ಬರ ಕೀಟನಾಶಕ ಇನ್ನಿತರ ರಾಸಾಯನಿಕ ಗೊಬ್ಬರ ಬಳಕೆಯ ಕುರಿತು ರೈತರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಯಾವ ಕಂಪನಿ ಗೊಬ್ಬರ ಬಳಸುಬೇಕು ಎಂಬುದರಿಂದಾಗಿ ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗೊಬ್ಬರ ಮತ್ತು ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ಕುರಿತು ಮಾಹಿತಿ ಕಾರ್ಯಗಾರವನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದರು.


ತೋಟಗಾರಿಕಾ ಇಲಾಖೆಯ ಸಂಪನ್ಮೂಲ ವ್ಯಕ್ತಿ ಅಮೃತ ಹಾಗೂ ಯುಎಎಲ್ ಡೈರಕ್ಟರ್ ಡಾ.ಧನಂಜಯ ಮತ್ತು ಯುಎಎಲ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನಾಗರಾಜ ಹೆಗಡೆ ಹಾಗೂ ಪ್ರಕಾಶ ರೈತರಿಗೆ ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಮಿಶ್ರ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.


ರೈತ ಉತ್ಪಾದನಾ ಕಂನಿಯ ಅಧ್ಯಕ್ಷ ಸೋಮಶೇಖರ, ಜಾಕೀರ್ ಬಾನು, ಜಿ.ಎಲ್.ಸೋಮಶೇಖರ್, ಈಶ್ವರಪ್ಪ ಗವಟೂರು, ನಾಗಭೂಷಣ ಬೆಳಂದೂರು, ನೆವಟೂರು ಸ್ವಾಮಿಗೌಡ ಇನ್ನಿತರ ರೈತರು ಪಾಲ್ಗೊಂಡಿದ್ದರು.


ಚೈತನ್ಯ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಸಂಚಾಲಕ ದಾನೇಶ ಸ್ವಾಗತಿಸಿ, ನಿರೂಪಿಸಿದರು. ಚೈತನ್ಯ ಸಂಸ್ಥೆಯ ಪೀಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here