ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಚಟ್ನಹಳ್ಳಿ ಮಹೇಶ್

0
195

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನವೆಂಬರ್ 21 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಬಹುತೇಕ ಮತದಾರರ ಸಂಪೂರ್ಣ ಒಲವು ಸೂರಿ ಶ್ರೀನಿವಾಸ್ ಪರವಾಗಿ ವ್ಯಕ್ತವಾಗಿರುವುದರಿಂದ ಸಾವಿರಕ್ಕೂ ಅತ್ಯಧಿಕ ಮತಗಳಿಂದ ಗೆಲುವು ನಿಶ್ಚಿತವೆಂದು ಸಾಹಿತಿ ಚಟ್ನಹಳ್ಳಿ ಮಹೇಶ್ ತಿಳಿಸಿದ್ದಾರೆ.

ಜಿಲ್ಲೆಯ ಕನ್ನಡ ಪರ ಹಿರಿಯರು, ಅನುಭವಿಗಳು, ಚಿಂತಕರು, ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರುಗಳೊಂದಿಗೆ ಜಿಲ್ಲೆಯಲ್ಲಿನ ಕನ್ನಡ ಭಾಷೆ, ನಾಡು-ನುಡಿ ಮತ್ತು ಸಾಹಿತ್ಯ ಬೆಳವಣಿಗೆಗಾಗಿ ನಿಕಟ ಒಡನಾಟ ಹಾಗೂ ಸಂಪರ್ಕ ದೊಂದಿಗೆ 40 ವರ್ಷಗಳ ಹಿಂದೆ ನಡೆದಿದ್ದ ರಾಜ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸಲು ಸಾಹಿತ್ಯಾಭಿಮಾನಿಗಳು ಉತ್ಸುಕರಾಗಿದ್ದಾರೆಂದರು.

ಜಿಲ್ಲಾ, ತಾಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಿ, ಸಾಹಿತಿಗಳಿಗೆ, ಲೇಖಕರಿಗೆ, ಚಿಂತಕರಿಗೆ ಮತ್ತು ಉದಯೋನ್ಮುಖ ಬರಹಗಾರರಿಗೆ ಅವಕಾಶ ನೀಡಿ ಮತ್ತು ಉತ್ತೇಜನ ನೀಡುವುದು. ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವುದು, ಗ್ರಾಮೀಣ ಸಾಹಿತ್ಯ ಸಿರಿಮಾಲೆಯ ಮೂಲಕ ಪ್ರತಿ ಹಳ್ಳಿಗಳಿಗೂ ಸಾಹಿತ್ಯದ ಕಂಪನ್ನು ಪಸರಿಸುವುದು, ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಿಸುವ ಸಲುವಾಗಿ ಕಥಾ ಕಮ್ಮಟ, ಕಾವ್ಯ ಕಮ್ಮಟ ಏರ್ಪಡಿಸುವುದು ಹಾಗೂ ಓದುವ ಅಭಿರುಚಿ ಮೂಡಿಸಲು ಮತ್ತು ಕನ್ನಡ ಭಾಷಾ ತಜ್ಞರೊಂದಿಗೆ ಚರ್ಚೆ, ಸಲಹೆ, ಸಹಕಾರಗಳನ್ನು ವಿಮರ್ಶಾತ್ಮಕವಾಗಿ, ಆರೋಗ್ಯಕರವಾಗಿ ಮತ್ತು ಸಕರಾತ್ಮಕವಾಗಿ ಸ್ವೀಕರಿಸಬೇಕಾಗಿದೆ.

ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಳಲ್ಲಿ ನಿತ್ಯ ನಿರಂತರವಾಗಿ ತೊಡಗಿಸಿಕೊಂಡಿರುವ ಸೂರಿ ಶ್ರೀನಿವಾಸ್ ಅವರಿಗೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಮತ್ತು ಅಭೂತಪೂರ್ವಕವಾಗಿ ಬೆಂಬಲ ವ್ಯಕ್ತವಾಗಿದೆ. ಕಳೆದ 30 ವರ್ಷಗಳಿಂದಲೂ ನಾಡಿನ, ಜಿಲ್ಲೆಯ ಶ್ರೇಷ್ಠ ಸಾಹಿತಿಗಳು, ಕನ್ನಡ ಪರ ಚಿಂತಕರ ನಿಕಟವಾದ ಸಂಪರ್ಕ ಮತ್ತು ಕನ್ನಡ ನುಡಿಯ ಸೇವಕರಾಗಿ ಕನ್ನಡ ಪರಿಚಾರಕರಾಗಿ ಜಿಲ್ಲೆಯ ಕನ್ನಡದ ಮನಸ್ಸುಗಳನ್ನು ಗೆದ್ದಿರುವ ಸೂರಿ ಶ್ರೀನಿವಾಸ್ ಅವರ ತಂದೆಯ ಪ್ರೇರಣೆಯಂತೆ ಇಡೀ ಕುಟುಂಬ ಸಾಹಿತ್ಯದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.

ರಸಗ್ರಹಣ, ಹಳಗನ್ನಡ, ಓದು, ಗ್ರಹಿಕೆಯ ಕಾರ್ಯಕ್ರಮ ಏರ್ಪಡಿಸುವುದು, ಕುವೆಂಪು, ಲಕ್ಷ್ಮೀಶ, ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಪೂರ್ಣಚಂದ್ರ ತೇಜಸ್ವಿ ಹಾಗೂ ನಾಡಿನ ದಿಗ್ಗಜರ ಸ್ಮರಣೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುವುದು ಸೇರಿದಂತೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡ ಭಾಷೆ, ನುಡಿಯನ್ನು ಪ್ರತಿ ವ್ಯಕ್ತಿಯ ಮನದಾಳದಲ್ಲಿ ಮಾತ್ರ ಸ್ವರೂಪಿಯಾಗಿ ಮೀಟುವಂತೆ ಮಾಡುವ ಉದ್ದೇಶ ಹೊಂದಿರುವ ಹಾಗೂ ಸಕ್ರೀಯವಾಗಿ, ನಿಷ್ಪಕ್ಷಪಾತವಾಗಿ ಈಗಾಗಲೇ ಸಾಹಿತ್ಯ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರನ್ನು ಇಡೀ ಜಿಲ್ಲೆಯ ಸಾಹಿತ್ಯಾಸಕ್ತರು, ಸಂಸ್ಕೃತಿ ಚಿಂತಕರು, ಸಾಹಿತ್ಯಾಭಿಮಾನಿಗಳು ಒಮ್ಮತದಿಂದ ತೀರ್ಮಾನಿಸಿದ್ದು, ಬಹುಮತಗಳಿಂದ ಗೆಲುವು ಕಾಣಲಿದ್ದಾರೆಂದರು.

ಜಾಹಿರಾತು

LEAVE A REPLY

Please enter your comment!
Please enter your name here