ಸಿಎಂ ಆದ ಬಳಿಕ ಬಸವರಾಜ್ ಬೊಮ್ಮಾಯಿ ಮೊದಲ ಬಾರಿಗೆ ಶೃಂಗೇರಿಗೆ ಭೇಟಿ ; ಬ್ಯಾನರ್ ಸ್ವಾಗತ ಹೇಗಿತ್ತು ಗೊತ್ತಾ ?

0
494

ಶೃಂಗೇರಿ : ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಶೃಂಗೇರಿಗೆ ಭೇಟಿ ನೀಡಿದರು. ಈ ವೇಳೆ ಸಿಎಂಗೆ ಸ್ವಾಗತ ಕೋರಲು ಬ್ಯಾನರ್ ಹಾಕಲಾಗಿತ್ತು. ಆದರೆ ಬ್ಯಾನರ್ ಗಳು ಮುಖ್ಯಮಂತ್ರಿರವರನ್ನು ಅಣಕಿಸುವಂತಿತ್ತು.

‘ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು’ ಎಂದು ಬರೆದು ಬ್ಯಾನರ್ ಹಾಕಲಾಗಿತ್ತು. ಶೃಂಗೇರಿ ಪಟ್ಟಣದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ 15 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಪದೇ ಪದೇ ಭರವಸೆ ನೀಡಿ ಸರ್ಕಾರ ಮಾತು ತಪ್ಪುತ್ತಲೇ ಬಂದಿದ್ದು ಸರ್ಕಾರ, ಜಿಲ್ಲಾಡಳಿತದ ಈ ಧೋರಣೆಯಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ಹಾಗಾಗಿ ಶೃಂಗೇರಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ ವೇಳೆ ಈ ರೀತಿ ಅಣಕವಾಡುವಂತೆ ಬ್ಯಾನರ್ ಅಳವಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here