ಸಿಗದ ಬೆಂಬಲ ಬೆಲೆ: ಟ್ರ್ಯಾಕ್ಟರ್‌ನಿಂದ ಈರುಳ್ಳಿ ಬೆಳೆ ನಾಶ ಮಾಡಿದ ರೈತ !

0
467

ಅಜ್ಜಂಪುರ: ಬೆಲೆ ಕುಸಿತದಿಂದ ತೀವ್ರ ಬೇಸತ್ತ ರೈತರೊಬ್ಬರು ತಾವು ಬೆಳೆದ ಈರುಳ್ಳಿ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ನಾಶ ಮಾಡಿದ ಘಟನೆ ಅಜ್ಜಂಪುರ ಬಳಿ ನಡೆದಿದೆ.

ತಾಲ್ಲೂಕಿನ ಗೊಂಡದಹಳ್ಳಿಯ ದೇವರಾಜ್ ತನ್ನ ಸ್ವಂತ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿಯನ್ನು, ಸ್ವತಃ ಟ್ರ್ಯಾಕ್ಟರ್ ಚಲಾಯಿಸಿ ನಾಶ ಪಡಿಸಿದ್ದಾರೆ.

ಈರುಳ್ಳಿ ಬೆಲೆ ತೀವ್ರ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಬೆಂಬಲ ಬೆಲೆಯೂ ಸಿಕ್ಕದೆ ತೀವ್ರ ನೊಂದು ಈ ರೀತಿ ಮಾಡಿದ್ದಾರೆ.

ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿಯಿಂದ ಅಲ್ಲಿನ ಬದುಕೂ ಅಸ್ತವ್ಯಸ್ತವಾಗಿದೆ. ಇದೀಗ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಪ್ರತಿಭಟನೆಯ ಮೂಲಕ ಆಗ್ರಹಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here