ಸಿಡಿಲು ಬಡಿದು ಯುವಕ ಸಾವು‌‌..! ಎಲ್ಲಿ ಇದು?

0
2373

ಶಿವಮೊಗ್ಗ: ಇಂದು ಸಂಜೆ ವೇಳೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಭಾರಿ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಯನೂರು ಸಮೀಪದ ಚಾಮುಂಡಿಪುರದಲ್ಲಿ ಇಂದು ಸಂಜೆ ನಡೆದಿದೆ.

ಆದೀಲ್ (18) ಸಾವನ್ನಪ್ಪಿದ ಮೃತ ದುರ್ದೈವಿಯಾಗಿದ್ದು, ಶಿವಮೊಗ್ಗದ ಟಿಪ್ಪು ನಗರದ‌‌ ನಿವಾಸಿಯಾಗಿದ್ದಾನೆ. ಈತ ತನ್ನ ಮಾವನ ಶುಂಠಿ ಕಣದಲ್ಲಿ‌ ಕೆಲಸ‌ ಮಾಡುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

ತನ್ನ ತಾಯಿಯ ತಮ್ಮ ಜಾಕೀರ್ ಅವರ ಶುಂಠಿ‌ ಕಣದಲ್ಲಿ ಕೆಲಸ ಮಾಡುವಾಗ ಆದೀಲ್ ಸಾವಿಗೀಡಾಗಿದ್ದಾನೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here