ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್: ಟ್ರ್ಯಾಕ್ಟರ್ ಸೇರಿದಂತೆ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ !

0
2458

ತರೀಕೆರೆ: ಭಾರೀ ಗಾಳಿ-ಮಳೆಯ ವೇಳೆ ಅಡಿಕೆ ಶೆಡ್‍ಗೆ ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಸುಮಾರು 25 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ವಸ್ತುಗಳು ನಾಶವಾಗಿರುವ ಘಟನೆ ತಾಲೂಕಿನ ವಿಟ್ಲಾಪುರ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೂ ಭಾರೀ ಮಳೆ ಸುರಿದಿದ್ದು, ರಾತ್ರಿ 9 ಗಂಟೆ ವೇಳೆಗೆ ಧಾರಾಕಾರ ಮಳೆ ವೇಳೆ ಬಡಿದ ಸಿಡಿಲು ಅಡಿಕೆ ಗೋಡೌನ್‍ಗೆ ಬಡಿದಿದೆ.

ಗೋಡೌನ್ ಮುಂಭಾಗದಲ್ಲಿದ್ದ ಗೊಬ್ಬರಿಗಳನ್ನು ಸ್ಥಳಿಯರು ಬೇರೆ ಕಡೆ ಶಿಫ್ಟ್ ಮಾಡಿದ್ದಾರೆ. ಅಡಿಕೆ ಗೋಡೌ ನ್‍ನಲ್ಲಿದ್ದವರು ಮಳೆ ಕಡಿಮೆಯಾಗಿದೆ ಎಂದು ಮನೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರು ಗೋಡೌನ್‍ನಲ್ಲಿಯೇ ಇದ್ದಿದ್ದರೆ ಬಹುಶಃ ದೊಡ್ಡ ಮಟ್ಟದ ಸಾವು-ನೋವುಗಳು ಸಂಭವಿಸುವ ಸಾಧ್ಯತೆ ಇತ್ತು. ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಗೋಡೌನ್‍ಗೆ ಬೆಂಕಿ ಬಿದ್ದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಆದರೆ, ಅವರು ಬೇರೆ ಕಡೆ ಹೋಗಿದ್ದರಿಂದ ಬರುವುದು ತಡವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಸ್ಥಳೀಯರೇ ಬೆಂಕಿಯನ್ನು ನಾಂದಿಸಿದ್ದರು. ಆದರೆ, ಇಡೀ ರಾತ್ರಿ ಹೊತ್ತಿ ಉರಿದ ಟ್ರ್ಯಾಕ್ಟರ್ ಬೆಳಗ್ಗೆ 10 ಗಂಟೆಯಾದರೂ ಉರಿಯುತ್ತಲೇ ಇದೆ. ಸುಮಾರು 25 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದು, ಸರ್ಕಾರ ನಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ಘಟನೆ ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here