ರಿಪ್ಪನ್ಪೇಟೆ: ಶನಿವಾರ ಸಂಜೆ ಪಟ್ಟಣದ ಸುತ್ತಮುತ್ತ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಬಾಳೂರು ಗ್ರಾಪಂ ವ್ಯಾಪ್ತಿಯ ಅಮಟೆಕೊಪ್ಪ (ಚಂದಾಳದಿಂಬ) ಎಂಬಲ್ಲಿ ನಡೆದಿದೆ ಸಿಡಿಲು ಬಡಿದು ಹುಲ್ಲಿನ ಬಣವೆ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.
ಈಶ್ವರ್ ಸಿಂಗ್ ಎಂಬುವವರಿಗೆ ಸೇರಿದ ಬಣವೆ ಇದಾಗಿದ್ದು, ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿಟ್ಟಿದ್ದರು.
ಈ ವಿಷಯ ತಿಳಿದು ಇಂದು ತಾಪಂ ಅಧ್ಯಕ್ಷರಾದ ವೀರೇಶ್ ಆಲವಳ್ಳಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಸೂಕ್ತ ಪರಿಹಾರ ವಿತರಿಸಲು ಕ್ರಮವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಾಳೂರು ಗ್ರಾಪಂ ಅಧ್ಯಕ್ಷರಾದ ಲೀಲಾವತಿ ದೊಡ್ಡಯ್ಯ, ಸದಸ್ಯರಾದ ಶಶಿಕಲಾ, ಪಾರ್ವತಮ್ಮ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ.ಬಿ ಮಂಜುನಾಥ್, ಸುರೇಶ್ ಸಿಂಗ್ ಮತ್ತು ರಾಜೇಂದ್ರ ಘಂಟೆ ಉಪಸ್ಥಿತರಿದ್ದರು.