ಸಿಡಿಲು ಬಡಿದು 18 ಕುರಿ ಸಾವು ; ಶಬ್ದಕ್ಕೆ ಓಡಿಹೋದ ಹತ್ತಾರು ಮರಿಗಳು

0
504

ಅಜ್ಜಂಪುರ : ಸಿಡಿಲು ಬಡಿದು 18 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಶಂಬೈನೂರು ಗ್ರಾಮದಲ್ಲಿ ಸಂಭವಿಸಿದೆ.

ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆಯಿಂದ 300ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ತರೀಕೆರೆ, ಅಜ್ಜಂಪುರ ಭಾಗಕ್ಕೆ ಬಂದಿದ್ದ ಕುರಿ ಮಾಲೀಕ ಕುರಿಗಳ ಸ್ಥಿತಿಯನ್ನು ಕಂಡು ದಿಗ್ಭ್ರಾಂತನಾಗಿದ್ದಾನೆ.

ಕುರಿಯನ್ನು ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುವಾಗ ಸಿಡಿಲು ಬಡಿದು ಬರೋಬ್ಬರಿ 18 ಕುರಿಗಳು ಸಾವನ್ನಪ್ಪಿದರೆ ಸಿಡಿಲಿನ ಶಬ್ಧಕ್ಕೆ ಬೆದರಿ ಭಯಗೊಂಡು ಹತ್ತಾರು ಕುರಿಗಳು ತಪ್ಪಿಸಿಕೊಂಡು ಹೋಗಿವೆ.

ಸರಿಸುಮಾರು 3-4 ಲಕ್ಷ ರೂ. ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡು ಮಾಲೀಕ ಕಂಗಾಲಾಗಿದ್ದಾನೆ.

ಜಾಹಿರಾತು

LEAVE A REPLY

Please enter your comment!
Please enter your name here