ಸಿದ್ದರಾಮಯ್ಯಗೆ ಕೇಸರಿ ಕಂಡರೆ ಅಲರ್ಜಿ ಅದಕ್ಕೆ ಮತಿ ಭ್ರಮಣೆಯಾದವರಂತೆ ಹೇಳಿಕೆ ನೀಡುತ್ತಿದ್ದಾರೆ ; ಆರಗ ಜ್ಞಾನೇಂದ್ರ

0
676

ರಿಪ್ಪನ್‌ಪೇಟೆ: ಮಠಾಧೀಶರು ಹಾಕುವ ಪೇಟದ ಬಗ್ಗೆ ಮಾತನಾಡಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕೇಸರಿ ಕಂಡರೆ ಅಲರ್ಜಿಯಾದವರಂತೆ ಮತಿ ಭ್ರಮಣೆಯಿಂದ ಈ ರೀತಿಯ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು

ಹುಂಚ ಹೋಬಳಿ ವ್ಯಾಪ್ತಿಯ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಕೋಟಿ ರೂ ವೆಚ್ಚದ ಕಮ್ಮಚ್ಚಿಯಲ್ಲಿನ ಕೆಪಿಎಸ್ ಸ್ಕೂಲ್ ಕಟ್ಟಡ ಕಾಮಗಾರಿ ಮತ್ತು ಎರಡು ಕೋಟಿ ರೂ. ವೆಚ್ಚದ ಎಣ್ಣೆನೋಡ್ಲು ಸಂಪರ್ಕ ರಸ್ತೆಯ ಹಾಗೂ ಒಂದು ಕೋಟಿ ರೂ. ವೆಚ್ಚದ ಹುಳಿಗದ್ದೆ-ಗಂದ್ರಳ್ಳಿ ಸಂಪರ್ಕ ರಸ್ತೆ ಎಂಟು ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಸೇರಿದಂತೆ ಅಮೃತ ಗ್ರಾಮದಲ್ಲಿ 17 ಲಕ್ಷ ರೂ. ವೆಚ್ಚದ ಕಸವಿಲೇವಾರಿ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಅನುದಾನ ತಂದರೂ ಕ್ಷೇತ್ರದ ಅಭಿವೃದ್ದಿ ಪೂರ್ಣವಾಗದು :

ಕಳೆದ ನಾಲ್ಕು ವರ್ಷದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಒಂದು ಸಾವಿರಕ್ಕೂ ಅಧಿಕ ಮೊತ್ತದ ಅನುದಾನವನ್ನು ತರಲಾಗಿದ್ದರೂ ಕೂಡಾ ಇನ್ನೂ ಅಭಿವೃದ್ದಿಯಾಗಬೇಕಾಗಿದೆ ಕೇಂದ್ರ ಸರ್ಕಾರದ ಅನುದಾನವನ್ನು ತಂದರೂ ಕ್ಷೇತ್ರದ ಅಭಿವೃದ್ದಿ ಪೂರ್ಣವಾಗದು ಕಾರಣ ಈ ಕ್ಷೇತ್ರ ಅಷ್ಟು ವಿಶಾಲ ಮತ್ತು ವಿಸ್ತೀರ್ಣವಾಗಿದೆ ಎಂದು ಹೇಳಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ವೇಳೆಯಲ್ಲಿ ಹಲವರು ಹೊಸನಗರ ಕ್ಷೇತ್ರವನ್ನು ಜನಪ್ರತಿನಿಧಿಗಳಾದವರು ನಿರ್ಲಕ್ಷ್ಯ ವಹಿಸುತ್ತಾರೆಂದು ಆಡಿಕೊಳ್ಳೂತ್ತಿದ್ದರು ಅದನ್ನು ಹುಸಿಗೊಳಿಸಿ ನಾನು ಈಗಾಗಲೇ ಹೊಸನಗರ ತಾಲ್ಲೂಕಿನ ಎರಡು ಹೋಬಳಿಗಳಾದ ನಗರ, ಹುಂಚ ಹೋಬಳಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ತರುವುದರೊಂದಿಗೆ ಎಂ.ಎಲ್.ಎ. ಚಾಲೆಂಜ್ ಜಾಬ್ ಅನ್ನುವಹಾಗೆ ತೆಗೆದುಕೊಂಡಿದ್ದೇನೆಂದರು.

ಈಗಾಗಲೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೇಗರವಳ್ಳಿಯಿಂದ ಆಗುಂಬೆ ಸಂಪರ್ಕ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ 96.20 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿ ಕಾಮಗಾರಿ ಸಹ ಪ್ರಗತಿಯಲ್ಲಿದೆ ಇನ್ನೂ ತೀರ್ಥಹಳ್ಳಿಯಿಂದ ಶಿವಮೊಗ್ಗ ಸಂಪರ್ಕದ ಭಾರತಿಪುರ ರಸ್ತೆ ಅಪಘಾತ ವಲಯವಾಗಿದ್ದು ಈ ರಸ್ತೆ ತಿರುವುವನ್ನು ನೇರಮಾಡುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿ ಪ್ರಸ್ತಾವನೆಗೆ ಸ್ಪಂದಿಸಿ ಭಾರತಿಪುರ ತಿರುವು ರಸ್ತೆಯನ್ನು ನೇರ ರಸ್ತೆಯನ್ನಾಗಿ ಪ್ಲೈ ಓವರ್ ರಸ್ತೆಗೆ ಮಂಜೂರಾತಿ ಮಾಡಿರುವುದನ್ನು ಸಚಿವರು ಪ್ರಶಂಸಿಸಿದರು.

ಈ ಸಭೆಯಲ್ಲಿ ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಅಮೃತ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ರಾಜು, ಉಪಾಧ್ಯಕ್ಷ ಬಂಡಿ ಲಿಂಗರಾಜ್, ಜಿ.ಪಂ ಮಾಜಿ ಸದಸ್ಯರಾದ ಬಿ.ಎಸ್.ಪುರುಷೋತ್ತಮ, ರಾಮಚಂದ್ರ ಬಂಡಿ, ಕರ್ನಾಟಕ ಪಬ್ಲಿಕ್‌ಸ್ಕೂಲ್ ಎಸ್.ಡಿ.ಎಂ.ಸಿ.ಅಧ್ಯಕ್ಷ ಟಿ.ಡಿ.ಸೋಮಶೇಖರ್, ಗ್ರಾ.ಪಂ.ಸದಸ್ಯರಾದ ದೇವರಾಜ್, ಮಂಜುಳ, ವಿಶ್ವನಾಥ್, ಸಿಡಿಸಿ ಅಧ್ಯಕ್ಷ ನಾಗೇಶ್, ಶಿವಮೊಗ್ಗ ಪದವಿ ಪೂರ್ವ ಕಾಲೇಜ್ ಡಿಡಿಪಿಐ ನಾಗರಾಜ್ ವಿ.ಕಾಗಲ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್, ಬಿ.ಆರ್.ಬಸವರಾಜ್, ಬಿಇಓ ವೀರಭದ್ರಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಕೆ.ಎನ್.ದಿನೇಶ್,ಅರಣ್ಯ ಇಲಾಖೆಯ ಸಿಸಿಎಫ್ ಹನುಮಂತಪ್ಪ, ಸಾಗರ ಉಪರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ, ವನ್ಯಜೀವಿ ವಿಭಾಗದ ಡಿಎಫ್‌ಓ ಐ.ಎಂ.ನಾಗರಾಜ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ,ಬಿ.ಮಂಜುನಾಥ ಜಂಬಳ್ಳಿ ಕಮಲಾಕ್ಷ, ನಾಗೇಂದ್ರಕಲ್ಲೂರು, ಗಿರೀಶ್ ಜಂಬಳ್ಳಿ, ಈಶ್ವರಪ್ಪ. ಜಂಬಳ್ಳಿ, ತೀರ್ಥಪ್ಪಗೌಡ ಶಿವಪುರ, ದುಂಡರಾಜ್ ಶಿವಪುರ, ಹುಳಿಗದ್ದೆ, ಜಂಬಳ್ಳಿ, ಅಮೃತ ಶಿವಪುರ ಎಣ್ಣೆನೋಡ್ಲು ಗ್ರಾಮಸ್ಥರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here