ಅಭಿವೃದ್ಧಿ ನೋಡಿ ಮತ ನೀಡಿ ; ಪದ್ಮಾವತಿ

0 303

ಹೊಸನಗರ: ದೇಶದಲ್ಲಿ 10 ವರ್ಷಗಳ ಕಾಲ ಆಡಳಿತ ನಡೆಸಿದ ವೈಖರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜನಪರವಾದ ಕಾರ್ಯಕ್ರಮಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರರವರ ಕ್ಷೇತ್ರದ ಅಭಿವೃದ್ಧಿ ನೋಡಿ ಮತ ನೀಡಿ ಎಂದು ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರಿ ಪದ್ಮಾವತಿ ಹೇಳಿದರು.

ಪಟ್ಟಣದ ಮುರುಳಿಧರರವರ ನೂತನ ಸಭಾಂಗಣದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ರಾಜ್ಯಕ್ಕೆ ಸೀಮಿತವಾಗಿದ್ದು ಇನ್ನೂ ಐದು ವರ್ಷಗಳ ಕಾಲ ಗ್ಯಾರಂಟಿ ರಾಜ್ಯ ಸರ್ಕಾರ ನೀಡಬೇಕು, ನೀಡುತ್ತದೆ. ಲೋಕಸಭೆ ಚುನಾವಣೆಗೂ ಗ್ಯಾರಂಟಿಗೂ ಯಾವುದೇ ಸಂಬಂಧವಿಲ್ಲ. ಕೆಲವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಅಪಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಓಟು ಪಡೆಯಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಗಳಿಂದ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ನಿಲ್ಲಲು ನಮ್ಮ ಬಿಜೆಪಿ ಪಕ್ಷ ಬಿಡುವುದಿಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಿದರೆ ಕರ್ನಾಟಕದಲ್ಲಿ ದೊಡ್ಡ ಹೋರಾಟವೇ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರದ ಸಾಕಷ್ಟು ಜನಪರವಾದ ಯೋಜನೆಗಳನ್ನು ನರೇಂದ್ರಮೋದಿಯವರು ನೀಡಿದ್ದಾರೆ. ಸುಕನ್ಯ ಸಮೃದ್ದಿ ಯೋಜನೆ ಮುದ್ರ ಯೋಜನೆ, ರೈತರಿಗೆ 6ಸಾವಿರ, ಹತ್ತು ಹಲವು ಯೋಜನೆಗಳು ಬಡವರಿಗಾಗಿ ಒದಾಗಿಸಿದೆ ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿರುವ ಬಡವರ ಪಾಲೀನ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ತಿಲಾಂಜಲಿ ಇಟ್ಟಿದೆ. ಮೋದೀಜಿಯವರ ಆಡಳಿತ ಯಡಿಯೂರಪ್ಪನವರ ಜನಪರ ಕೆಲಸ ಹಾಗೂ ರಾಘವೇಂದ್ರರವರ ಅಭಿವೃದ್ಧಿಯನ್ನು ನೋಡಿ ಮತ ಕೊಡಿ ಇಡೀ ದೇಶವೇ ಶಿವಮೊಗ್ಗ ಲೋಕಸಭೆಯ ಚುನಾವಣೆಯ ಮೇಲೆ ಕಣ್ಣಿಟ್ಟಿದೆ ಅತೀ ಹೆಚ್ಚು ಮತಗಳ ಅಂತರದಿಂದ ರಾಘವೇಂದ್ರರವರನ್ನು ಗೆಲ್ಲಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಗಾಯಿತ್ರಿ, ಆಶಾ ರವೀಂದ್ರ, ಜ್ಯೋತಿ ರಘು, ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್, ಎ.ವಿ.ಮಲ್ಲಿಕಾರ್ಜುನ್, ಶ್ರೀಧರ ಉಡುಪ, ಎಸ್.ಹೆಚ್ ನಿಂಗಮೂರ್ತಿ, ಸತ್ಯನಾರಾಯಣ ವಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವರ್ತೆಶ್, ಸುಮತಿ ಪೂಜಾರ್, ಎನ್.ಆರ್ ದೇವಾನಂದ್, ಗುಲಾಬಿ ಮರಿಯಪ್ಪ, ಗಾಯತ್ರಿ ನಾಗರಾಜ್, ಕೃಷ್ಣವೇಣಿ, ಮಂಜುನಾಥ್ ಸಂಜೀವಣ್ಣ, ಪದ್ಮಾ ಸುರೇಶ್, ಎಂ.ವಿ ಜಯರಾಮ್, ಕಾಯಿ ನಾಗೇಶ, ಶೀತಲ್ ಶ್ರಿನಿವಾಸ್, ಮುರುಳಿಧರ, ವಿಜಯಕುಮಾರ್, ರಾಜೇಶ್ವರಿ, ಸುಶೀಲ, ಸವಿತಾ, ನಾಗರತ್ನ, ಶಶಿಕಲಾ ಅನಂತ್, ಸುಜಾತ, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!