ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖವಾಡ ಧರಿಸಿದ್ದಾರೆ ; ಸಚಿವ ಸುನಿಲ್ ಕುಮಾರ್

0
161

ತೀರ್ಥಹಳ್ಳಿ : ಒಬಿಸಿ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ತನ್ನ 40 ವರ್ಷಗಳ ಅವಧಿಯಲ್ಲಿ ಬರಿ ಮತ ಬ್ಯಾಂಕ್‌ಗಾಗಿ ಬಳಸಿಕೊಂಡಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು

ಶನಿವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನೆಡೆದ ಒಬಿಸಿ ಸಮಾವೇಶದಲ್ಲಿ ಮಾತನಾಡಿ, ಜನಜಾಗೃತಿ ಸಮಾವೇಶವನ್ನು ಮಾಡುವುದರ ಮೂಲಕ ಎಲ್ಲಾ ಸಮುದಾಯದ ಎಲ್ಲಾ ವ್ಯಕ್ತಿಗಳಿಗೆ ತಲುಪಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ ಕೊಟ್ಟಿದೆ ಅದನ್ನು ನಾವು ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಯೋಜನೆ ಸಿಕ್ಕಿದ್ಯಾ ಎಂದು ಕಾರ್ಯಕರ್ತರು ನೋಡಬೇಕು, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾವುದೊ ಒಂದು ಸಮುದಾಯಕಕ್ಕಾಗಿ ಬಿಜೆಪಿ ಸರ್ಕಾರ ಕೆಲಸವನ್ನು ಮಾಡಿಲ್ಲ ಒಬಿಸಿಯ ಅಷ್ಟು ಸಮುದಾಯಕ್ಕೂ ಕೇಂದ್ರ ಮತ್ತು ರಾಜ್ಯಸರ್ಕಾರದ ಯೋಜನೆಗಳು ಸಿಗುವಂತಾಗಬೇಕು ಹಿಂದುಳಿದ ವರ್ಗಕ್ಕೆ ಬೊಮ್ಮಾಯಿ ಸರ್ಕಾರ 110 ಕೋಟಿ ರೂ. ಕೊಟ್ಟಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖವಾಡ ಧರಿಸಿದ್ದಾರೆ. ಹಿಂದುಳಿದ ವರ್ಗ ಮತ್ತು ಎಸ್ ಸಿ ಮತ್ತು ಎಸ್ ಟಿ ವರ್ಗಕ್ಕೆ ಏನಾದರು ಸಿಕ್ಕಿದ್ದರೆ ಅದು ಬಿಜೆಪಿ ಸರ್ಕಾರ ಬಂದ ಮೇಲೆ ಎಂದರು. ಮಂಗಳೂರಿನಲ್ಲಿ ಹಿಂದೂಗಳ ಹತ್ಯೆಯಾದಾಗ ಸಿದ್ದರಾಮಯ್ಯ ಬರಲಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಗೆ ಬಿಡದ ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಅದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು. ನಾವು ಎಲ್ಲಾ ಸಮುದಾಯವನ್ನು ಒಟ್ಟುಗೂಡಿಸಿ ಭಾರತವನ್ನು ಜಗತ್ತಿನ ಅತೀ ದೊಡ್ಡ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ವರದಿ : ಅಕ್ಷಯ್ ಕುಮಾರ್
ಜಾಹಿರಾತು

LEAVE A REPLY

Please enter your comment!
Please enter your name here