ಸಿದ್ದಾಪುರದಿಂದ ಉಡುಪಿ – ಮಂಗಳೂರಿಗೆ ನೇರ ಬಸ್ ಸೌಲಭ್ಯ

0
334

ರಿಪ್ಪನ್‌ಪೇಟೆ: ಮಲೆನಾಡಿನ ಹೆಸರಾಂತ ಸಾರಿಗೆ ಸಂಸ್ಥೆಯವರಾದ ಶ್ರೀಗಜಾನನ ವಾಹನ ಸಾರಿಗೆ ಸಂಸ್ಥೆಯಿಂದ ಸಿದ್ದಾಪುರ-ಸಾಗರ-ಮಣಿಪಾಲ ಮಂಗಳೂರು ನೇರ ಸಂಪರ್ಕಕ್ಕೆ ಸುಸಜ್ಜಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಸಿದ್ದಾಪುರದಿಂದ ರಾತ್ರಿ 8-10 ಕ್ಕೆ ಹೊರಟು ಸಾಗರ – ಆನಂದಪುರ – ರಿಪ್ಪನ್‌ಪೇಟೆ – ಮಣಿಪಾಲ – ಮಂಗಳೂರು – ಉಡುಪಿ – ಆಗುಂಬೆ – ತೀರ್ಥಹಳ್ಳಿ ಮಾರ್ಗವಾಗಿ ಎನಪೊಯ ಆಸ್ಪತ್ರೆ ಮತ್ತು ಕೆ.ಎಸ್.ಹೆಗಡೆ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳಿಗೆ ಹಾಗೂ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತು ಮಂಗಳೂರು, ಕೇರಳ ರಾಜ್ಯಗಳಿಗೆ ಹೋಗಲು ಈ ಬಸ್ ಸೌಲಭ್ಯದಿಂದ ಸಹಕಾರಿಯಾಗಲಿದೆ ಎಂದು ರಿಪ್ಪನ್‌ಪೇಟೆ ಶ್ರೀಗಜಾನನ ಸಾರಿಗೆ ಸಂಸ್ಥೆಯ ಮ್ಯಾನೇಜರ್ ಗೋಪಾಲ್, ಸ್ಟ್ಯಾಂಡ್ ಏಜೆಂಟ್ ಆರ್.ರಂಗಸ್ವಾಮಿ, ಕೆ.ಗಣೇಶ್‌ಪ್ರಸಾದ್ ಹಾಗೂ ಶೋಭ ಬಸ್ ಚಾಲಕ ದೇವಣ್ಣ ಮತ್ತು ನಿರ್ವಾಹಕ ಭಗವಂತಪ್ಪ ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here