ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಪ್ರತಿಷ್ಠಾವರ್ಧಂತ್ಯುತ್ಸವ ; ಮಹಾರಂಗಪೂಜೆ, ದಿಂಡಿ ದೀಪೋತ್ಸವ, ಉಯ್ಯಾಲೆ ಧಾರ್ಮಿಕ ಸಭಾ ಕಾರ್ಯಕ್ರಮ

0
338

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಐದನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವದ ಎರಡು ದಿನದ ವಿಶೇಷ ಧಾರ್ಮಿಕ ಸಮಾರಂಭ ಪೂಜಾ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಇಂದು ಬೆಳಗ್ಗೆ ಆಗಮಿಕ ಪರಿವಾರದವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು. ನಂತರ ಶಿವಮೊಗ್ಗದ ವೇದ ಬ್ರಹ್ಮಶ್ರೀ ವಸಂತಭಟ್ ನೇತೃತ್ವದಲ್ಲಿ ಅಗಮಿಕ ಪರಿವಾರದವರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನನಾಂದಿ ಸಮಾರಾಧನೆ ಮಹಾಸಂಕಲ್ಪ, ಋತ್ವಿಗ್ವರಣ, ಸಾಮೂಹಿಕ ಷಣ್ ನಾರೀಕೇಳ ಗಣಹೋಮ, ನವಗ್ರಹ ಹೋಮ, ತೀರ್ಥಪ್ರಸಾದ ವಿನಿಯೋಗ ನಡೆಸಿದರು.

ಈ ಪೂಜಾ ಕಾರ್ಯದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಎನ್.ಕಾಮತ್, ಎಂ.ಡಿ.ಇಂದ್ರಮ್ಮ, ಸಿ.ಚಂದ್ರುಬಾಬು, ಆರ್.ಈ.ಈಶ್ವರಶೆಟ್ಟಿ, ಎಂ.ಸುರೇಶ್ ಸಿಂಗ್, ವೈ.ಜೆ.ಕೃಷ್ಣ, ಶುಭ ಎಸ್.ಪೈ,ಗುರುರಾಜಭಟ್, ಎನ್.ಸತೀಶ್, ಎಂ.ಬಿ.ಮಂಜುನಾಥ, ಆರ್.ಹೆಚ್.ದೇವದಾಸ್, ಗಣಪತಿ ಸುಬ್ರಾಯಪುರಾಣಿಕ್, ಕೆ.ಎ.ಅರವಿಂದ, ನಾಗರತ್ನದೇವರಾಜ್, ಪದ್ಮಾಸುರೇಶ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಸುಧೀಂದ್ರ ಪೂಜಾರಿ, ಆರ್.ರಾಘವೇಂದ್ರ, ಸರಸ್ವತಿ, ಜಯಲಕ್ಷ್ಮಿ ಮೋಹನ್, ಬೇಕರಿ ನಾರಾಯಣ, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್, ಚಂದ್ರುಬಾಬು ಕೆ.ಎ.ಹಲವರು ಪಾಲ್ಗೊಂಡಿದ್ದರು.

ತುಲಾಭಾರದ ತೂಕ ಅಳತೆ ಮಾಪನ ಕೊಡುಗೆ:

ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ತುಲಾಭಾರ ಸೇವೆ ಮಾಡಿಸುವ ಭಕ್ತರಿಗಾಗಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಸತ್ಯನಾರಾಯಣ್‌ರಾವ್ ಮತ್ತು ಕುಟುಂಬದವರು ತೂಕ ಅಳತೆ ಮಾಪನವನ್ನು ಕೊಡುಗೆಯಾಗಿ ದೇವಸ್ಥಾನಕ್ಕೆ ನೀಡಿದರು.

ಮಹಾರಂಗಪೂಜೆ ದಿಂಡಿ ದೀಪೋತ್ಸವ ಉಯ್ಯಾಲೆ:

ಇಲ್ಲಿನ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಪ್ರತಿಷ್ಠಾವರ್ಧಂತ್ಯುತ್ಸವದ ಅಂಗವಾಗಿ ಏಪ್ರಿಲ್ 24 ರಂದು ಬೆಳಗ್ಗೆ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಕಲಾವೃದ್ದಿ ಹೋಮ,ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮಹಾಪೂಜೆ, ಕನಕಾಭೀಷೇಕ 6 ಗಂಟೆಗೆ ಮಹಾರಂಗಪೂಜೆ, ದಿಂಡಿ ದೀಪೋತ್ಸವ, ಉಯ್ಯಾಲೆ ಸೇವೆ ಏರ್ಪಡಿಸಲಾಗಿದೆ.

ಇದೇ ದಿನ ಬೆಳಗ್ಗೆ 12 ಗಂಟೆಗೆ ಗೌರಿಗದ್ದೆ ಅವಧೂತ ವಿನಯ್ ಗುರೂಜಿಯವರ ದಿವ್ಯಸಾನಿಧ್ಯದಲ್ಲಿ ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗಿದೆ.

ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಎನ್.ಕಾಮತ್ ವಹಿಸುವರು.

ಮುಖ್ಯ ಅತಿಥಿಗಳಾಗಿ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ್‌ಪೂಜಾರಿ, ಶಾಸಕ ಹರತಾಳು ಹಾಲಪ್ಪ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ತಹಶೀಲ್ದಾರ್ ಎಸ್.ವಿ.ರಾಜೀವ್, ಸಿದ್ದಿವಿನಾಯಕ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್ ಭಾಗವಹಿಸುವರು ಎಂದು ದೇವಸ್ಥಾನ ಧರ್ಮದರ್ಶಿ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here