ಸಿನಿಮಾ ಕ್ಷೇತ್ರಕ್ಕೆ ಪುನೀತ್ ಕೊಡುಗೆ ಅಪಾರ: ನಾಗೇಶ್

0
241

ಮೂಡಿಗೆರೆ: ಸಿನಿಮಾ ಕ್ಷೇತ್ರಕ್ಕೆ ನಟ ಪುನೀತ್ ರಾಜ್‍ಕುಮಾರ್ ಅವರ ಕೊಡುಗೆ ಅಪಾರ ಎಂದು ಕೊಟ್ಟಿಗೆಹಾರದ ಫ್ರೆಂಡ್ಸ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್ ಹೇಳಿದರು.

ಪಟ್ಟಣದ ಫ್ರೆಂಪ್ರೆಂಡ್ಸ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ ಪುನೀತ್ ರಾಜ್‍ಕುಮಾರ್ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯದಿಂದಲೂ ತನ್ನ ನಟನೆಯಿಂದ ಜನಮನ ಸೂರೆಗೊಂಡ ಪುನೀತ್ ತಂದೆಯವರ ಪ್ರಭಾವಲಯದ ನಡುವೆ ಇದ್ದರೂ ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಡಾ. ರಾಜ್‍ಕುಮಾರ್ ಅವರ ಸರಳತೆ, ವಿನಯವನ್ನು ಮೈಗೂಡಿಸಿಕೊಂಡು ಸ್ಟಾರ್ ನಟನಾದರೂ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು. ತೆರೆಯ ಮೇಲೆ ಮಾತ್ರವಲ್ಲದೇ ತಮ್ಮ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ತೆರೆಯ ಹಿಂದೆಯೂ ನಾಯಕರಾಗಿದ್ದರು ಎಂದರು.

ಗ್ರಾಮಪಂಚಾಯಿತಿ ಮಾಜಿ ಸದಸ್ಯ ಸೋಮೇಶ್, ಸಂಘದ ಗೌರವಾಧ್ಯಕ್ಷ ವೇಣುಗೋಪಾಲ್ ಪೈ, ಕಾರ್ಯದರ್ಶಿ ರಮೇಶ್, ಮಾಜಿ ಅಧ್ಯಕ್ಷ ದೇವೇಂದ್ರ, ಸದಸ್ಯರಾದ ಪ್ರಸಾದ್, ದೀಪಕ್, ಪೂರ್ಣೇಶ್, ಜಗದೀಶ್, ಗಣೇಶ್, ದಿನೇಶ್, ಶರಣ್, ಮಹೇಂದ್ರ, ದಿಲೀಪ್, ಶಿವಪ್ರಸಾದ್, ಮದನ್, ಸುಲೈಮಾನ್, ವಿಜಯ್ ಶಿಕ್ಷಕ ಭಕ್ತೇಶ್ ಇದ್ದರು. ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here