ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ !!

0
392

ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿ ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಇತ್ತೀಚೆಗೆ ಗಾಂಜಾ ಸೇವನೆ ಆರೋಪದಲ್ಲಿ ಕಡೂರಿನ ಧನರಾಜ್ ಬಂಧನಕ್ಕೊಳಗಾಗಿದ್ದ, ಆತನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇದೇ ತಿಂಗಳು 24ರಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಚಾರಣಾಧೀನ ಖೈದಿ ಕಾವಲಿಗೆ ಓರ್ವ ಜೈಲು ಸಿಬ್ಬಂದಿ ಗಣೇಶ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಮೋಹನ್ ಕುಮಾರ್ ರನ್ನು ನಿಯೋಜಿಸಲಾಗಿತ್ತು. ತಪ್ಪಿಸಿಕೊಳ್ಳಲು ಉಪಾಯ ಮಾಡಿ, ಬಹಿರ್ದೆಸೆಗೆ ಹೋಗಬೇಕೆಂದು ನಂಬಿಸಿ ಹೊರಬಂದಾಗ ಫಿಟ್ಸ್ ಬಂದಂತೆ ನಟಿಸಿದ್ದು ಓರ್ವ ಸಿಬ್ಬಂದಿಯನ್ನು ಕರೆತರಲು ಹೋಗಿದ್ದಾರೆ.

ಈ ಸಂದರ್ಭದಲ್ಲಿ ಮತ್ತೋರ್ವ ಸಿಬ್ಬಂದಿಯನ್ನು ತಳ್ಳಿ ಶೌಚಾಲಯದಲ್ಲಿ ಕೂಡಿ ಹಾಕಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಖೈದಿ ಪರಾರಿಯಾಗಿರುವ ಬಗ್ಗೆ ಕಾರಾಗೃಹ ಸಿಬ್ಬಂದಿಗಳು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಗಮನಕ್ಕೆ ತಂದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಿಂದ ಬಂಧಿಖಾನೆ ಅಧೀಕ್ಷಕರು ಆಗಮಿಸಿದ್ದು, ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಜೈಲು ಸಿಬ್ಬಂದಿ ಗಣೇಶ್ ಮತ್ತು ಗೃಹರಕ್ಷಕದಳದ ಮೋಹನ್ ಕುಮಾರ್ ರನ್ನು ಅಮಾನತು ಮಾಡುವಂತೆ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here