24.3 C
Shimoga
Friday, December 9, 2022

ಸಿಸಿ ಕ್ಯಾಮೆರಾ ಸಹಿತ ಬೀದಿದೀಪ ಅಳವಡಿಸಿ ; ಹೊಸನಗರ NSUI ಘಟಕ ಆಗ್ರಹ


ಹೊಸನಗರ: ಪಟ್ಟಣದ ಹೃದಯ ಭಾಗವಾದ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯತಿ ಕಚೇರಿಯ ನಡುವೆ ಸಾಗುವ ಕಾಲುದಾರಿಗೆ ಸಿಸಿ ಕ್ಯಾಮೆರಾ ಸಹಿತ ಬೀದಿದೀಪ ಅಳವಡಿಸಬೇಕೆಂದು ಆಗ್ರಹಿಸಿ ಎನ್‌ಎಸ್‌ಯುಐ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಮತ್ತು ಇಒ ರವರಿಗೆ ಮನವಿ ಸಲ್ಲಿಸಿದರು.


ಈ ವೇಳೆ ಎನ್‌ಎಸ್‌ಯುಐ ಘಟಕ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಡಿ.ಆರ್.ಮಂಜುನಾಥ ಶ್ರೇಷ್ಠಿ ಮಾತನಾಡಿ, ಈ ಸ್ಥಳ ರಾತ್ರಿ ವೇಳೆಯಲ್ಲಿ ಅನೈತಿಕ ತಾಣವಾಗಿ ಕೆಲವು ಅಕ್ರಮ ಚಟುವಟಿಕೆಗಳಿಗೆ ನಾಂದಿ ಹಾಡುತ್ತಿದೆ. ಸರಿಯಾದ ಬೀದಿದೀಪದ ವ್ಯವಸ್ಥೆ ಇಲ್ಲರಿದಿರುವುದೇಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಕೂಡಲೇ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಚೇತನ್‌ದಾಸ್ ಹೊಸಮನೆ, ಮಹೇಂದ್ರ ಮಾರಿಗುಡ್ಡ, ಸ್ವರೂಪ, ಕಾಳಿಕಪುರ ಚೇತನ್ ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!