ಸೀರೆಯಿಂದ ಫ್ಯಾನಿಗೆ ನೇಣು ಹಾಕಿ ಮಗಳನ್ನು ಸಾಯಿಸಿ ಸೀರೆಯ ಇನ್ನೊಂದು ತುದಿಗೆ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ.!

0
3196

ಭದ್ರಾವತಿ: ಹೊಸಮನೆ ಪೊಲೀಸ್ ಠಾಣೆ ಭದ್ರಾವತಿ ವ್ಯಾಪ್ತಿಯ ಯಕಿನ್ಸ ಕಾಲೋನಿಯ ಮಹಿಳೆಯೋರ್ವರು ತನ್ನ ಮಗಳಿಗೆ ನೇಣು ಹಾಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ದುರಂತದ ಘಟನೆ ನಡೆದಿದೆ.

ತನ್ನ ಗಂಡ ವ್ಯವಹಾರದಿಂದ ಉಂಟಾದ ನಷ್ಟದಿಂದಾಗಿ ಮಾಡಿದ್ದ ಸಾಲವನ್ನು ತೀರಿಸಲು ಕಷ್ಟವಾಗಿರುವ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು 11 ವರ್ಷದ ಮಗಳಾದ ಮಧುಶ್ರೀಯನ್ನು ಸೀರೆಯಿಂದ ಫ್ಯಾನಿಗೆ ನೇಣು ಹಾಕಿ ಸಾಯಿಸಿ ನಂತರ ಸೀರೆಯ ಇನ್ನೊಂದು ತುದಿಗೆ ತಾಯಿ ಸಂಗೀತ (35) ನೇಣು ಹಾಕಿಕೊಂಡು ಸಾವು ಕಂಡಿದ್ದಾರೆಂದು ಹೊಸಮನೆ ಪೊಲೀಸರಿಗೆ ನೋಡಿದ ದೂರಿನಲ್ಲಿ ಹೇಳಲಾಗಿದೆ.

ಮೃತೆಯ ತಂದೆ ಈ ಸಂಬಂಧ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಹೊಸಮನೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತನಿಖೆ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here