23.2 C
Shimoga
Sunday, November 27, 2022

ಸುಪ್ರೀಂಕೋರ್ಟ್‌ನ EWS ತೀರ್ಪು ಸ್ವಾಗತಾರ್ಹ ; ದೀಪಕ್ ದೊಡ್ಡಯ್ಯ

ಚಿಕ್ಕಮಗಳೂರು : ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ10% ಮೀಸಲಾತಿಯನ್ನು ಸುಪ್ರೀಂಕೋರ್ಟ್ 4:1 ಬಹುಮತದೊಂದಿಗೆ ಎತ್ತಿ ಹಿಡಿದಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ತಿಳಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಐವರು ನ್ಯಾಯಾಧೀಶರ ಸುಪ್ರೀಂಕೋರ್ಟ್ ಪೀಠವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10% ಮೀಸಲಾತಿಗೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10 ರಷ್ಟು ಮೀಸಲಾತಿಯ ಲಾಭವನ್ನು ಪಡೆಯುತ್ತದೆ. ಕೇಂದ್ರ ಸರ್ಕಾರವು 103ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ 2019ರಂದು ಜನವರಿಯಲ್ಲಿ ಆರ್ಥಿಕವಾಗಿ ದುರ್ಬಲರಿಗಾಗಿ ಈ ಶೇ 10ರಷ್ಟು ಮೀಸಲಾತಿಯ ಕೋಟಾ ಜಾರಿಗೆ ತರಲಾಗಿತ್ತು.
SC, ST ಮತ್ತು OBC ಹೊರತುಪಡಿಸಿ ಇತರ ವ್ಯಕ್ತಿಗಳು ಮತ್ತು ವಾರ್ಷಿಕ ಕುಟುಂಬ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಂವಿಧಾನದ 15(6) ಮತ್ತು 16(6) ವಿಧಿಗಳನ್ನು ಪರಿಚಯಿಸಿ 103 ನೇ ತಿದ್ದುಪಡಿ ಕಾಯಿದೆಯೊಂದಿಗೆ ಉದ್ಯೋಗಗಳು ಮತ್ತು ಪ್ರವೇಶಗಳಲ್ಲಿ 10 ಪ್ರತಿಶತ ಮೀಸಲಾತಿಯನ್ನು ಒದಗಿಸುವ ಕುರಿತು EWS ಕೋಟಾವನ್ನು ಪರಿಚಯಿಸಲಾಗಿತ್ತು. ಆದರೆ ಈ ಕೋಟಾದ ಸಿಂಧುತ್ವದ ಕುರಿತು ಪ್ರಶ್ನೆಗಳು ಎದ್ದಿದ್ದವು. ಪ್ರಸ್ತುತ ವಿಚಾರಣೆ ನಡೆಸಿದ ನ್ಯಾಯಾಲಯ EWS ಕೋಟಾವನ್ನು ಎತ್ತಿಹಿಡಿದಿದೆ.


ಮೀಸಲಾತಿ ಸಿಗದ ಆರ್ಥಿಕ ದುರ್ಬಲ ವರ್ಗಗಳು ಏಳಿಗೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇದನ್ನು ಜಾರಿಗೆ ತಂದಿದ್ದರು ಇದು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಇದೊಂದು ದೊಡ್ಡ ಕಾರ್ಯವಾಗಿದ್ದು ಇದನ್ನು ಜಾರಿಗೊಳಸಿದ ಕೇಂದ್ರ ಸರ್ಕಾರಕ್ಕೂ, ಪ್ರಧಾನಿ ಮೋದಿ ಅವರಿಗೂ ಹಾಗೂ ಇದನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ಗೂ ಜಿಲ್ಲಾ ಬಿಜೆಪಿ ಧನ್ಯವಾದಗಳನ್ನು ಸಮರ್ಪಿಸುತ್ತದೆ ಎಂದು ತಿಳಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!