ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರಾಣಿ ಓಡಿಸುವ ಯಂತ್ರ ಆವಿಷ್ಕಾರ: ಹೊಸನಗರ ವಿದ್ಯಾರ್ಥಿ ಪಾಲು!

0
1527

ಹೊಸನಗರ: ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ರೈತರಿಗೆ ಆಶಾದಾಯಕವಾಗುವಂಥಹ ಕಾಡು ಪ್ರಾಣಿ-ಪಕ್ಷಿಗಳನ್ನು ಓಡಿಸುವ ಯಂತ್ರವನ್ನು ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ತಂಡ ಸಿದ್ದಪಡಿಸಿದ್ದಾರೆ.

ಅರಣ್ಯ ಪ್ರದೇಶಗಳಿಗೆ ತಾಗಿಕೊಂಡಿರುವಂತಹ ಕೃಷಿ ಭೂಮಿಗಳಿಗೆ ಆಗಾಗ್ಗೆ ಕಾಡು ಪ್ರಾಣಿಗಳು ಹಾಗೂ ಕೆಲವು ಪಕ್ಷಿಗಳಿಂದ ಬಹಳ ಹಾನಿಯುಂಟಾಗುತ್ತಿದೆ ಇದರಿಂದ ಕೃಷಿಕರು ಆರ್ಥಿಕವಾಗಿ ಬಹಳ ನಷ್ಟವನ್ನು ಅನುಭವಿಸುತ್ತಿದ್ದಾರೆ ಈಗಾಗಲೇ ಅನೇಕ ರೋಗಗಳಿಂದ ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಅನುಭವಿಸುತ್ತಿರುವ ಕೃಷಿಕರು ಈ ಪ್ರಾಣಿ-ಪಕ್ಷಿಗಳ ಹಾವಳಿಯಿಂದ ಕಂಗೆಟ್ಟು ಹೋಗಿದ್ದಾರೆ.

ಕೃಷಿಕರ ಕಷ್ಟವನ್ನು ಮನಗಂಡ ಸುಳ್ಯ ತಾಂತ್ರಿಕ ಕಾಲೇಜಿನ ಕೆವಿಜಿ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಯಾದ ಹೊಸನಗರದ ಮಹೇಶ್‌ಗೌಡ ಮತ್ತು ವಸಂತರವರ ದಂಪತಿಗಳ ಪುತ್ರ ದರ್ಶನ್, ಅನಿಲ್‌ಕುಮಾರ್ ನಾಯ್ಕ್, ಅಬ್ದುಲ್ ವಾಹಿದ್, ಇವರುಗಳು ಕಾಡು ಪ್ರಾಣಿ-ಪಕ್ಷಿ ಓಡಿಸುವ ಯಂತ್ರವನ್ನು ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ಪ್ರೋ ಅಭಿಜ್ಞ ಬಿ.ಬಿಯವರ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಡಾ|| ಉಮಾಶಂಕರ್ ಕೆ.ಎಸ್ ಮತ್ತು ಯೋಜನಾ ಸಂಯೋಜಕ ಪ್ರೋ. ಯುವರಾಜ್ ಕೆ.ಬಿಯವರ ಸಲಹೆ ಸೂಚನೆಯೊಂದಿಗೆ ಸಿದ್ದಪಡಿಸಿದ್ದಾರೆ.

ಈ ಯಂತ್ರವೂ ಬೆಳೆ ಬೆಳೆದಿರುವ ಪ್ರದೇಶದಲ್ಲಿ ಸ್ಥಾಪಿಸಬೇಕಾಗಿದ್ದು ಯಂತ್ರದ ಸುತ್ತಲು 360ಡಿಗ್ರಿಯಲ್ಲಿ ಪ್ರಾಣಿ ಪಕ್ಷಗಳ ಬರವಿಕೆಯನ್ನು ಗುರುತಿಸುತ್ತದೆ ಈ ಗುರುತಿಸುವಿಕೆಯನ್ನು ಪ್ರೋಕ್ಸ್ಮಿಟ್ ಸೆನ್ಸರ್ ಮೂಲಕ ಬಂದ ಸಿಗ್ನಲ್ ಅನ್ನು ಆರ್ಡಿನೋ ಬೋರ್ಡಿಕೆ ರವಾನಿಸುತ್ತದೆ ಆರ್ಡಿನೋ ಬೋರ್ಡಿನಲ್ಲಿ ಬಂದ ಸಿಗ್ನಲ್ ಧ್ವನಿ ಮತ್ತು ಬೆಳಕಿನ ಉಪಕರಣಗಳಿಗೆ ಆದೇಶವನ್ನು ಕೊಡುವುದರ ಮೂಲಕ ಶಬ್ದ ಉಂಟಾಗುತ್ತದೆ ಜೊತೆಗೆ ಟಾರ್ಚ್ ಬೆಳಕಿನಂತೆ ಬೆಳಕು ಹಾಯುವುದರ ಮೂಲಕ ಬಂದ ಪ್ರಾಣಿ-ಪಕ್ಷಗಳಿಗೆ ಮನುಷ್ಯನ ಇರುವಿಕೆಗೆ ಅನುಭವವನ್ನು ಕೊಟ್ಟು ಪ್ರಾಣಿ-ಪಕ್ಷಗಳು ಓಡಿ ಹೋಗುವಂತೆ ಮಾಡುತ್ತದೆ.

ಈ ಆವಿಷ್ಕಾರದಿಂದ ಕರ್ನಾಟಕ ರಾಜ್ಯದ ರೈತ ಕುಟುಂಬಕ್ಕೆ ಅನುಕೂಲವಾಗಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here