ಸೂಡೂರು ಸೇತುವೆ ಬಳಿ ಕಾರು ಅಪಘಾತ ಇಬ್ಬರಿಗೆ ಗಾಯ | ಕೋಡೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು..!

0
3743

ಹೊಸನಗರ : ಹೊಸನಗರ ತಾಲೂಕಿನ ಸೊನಲೆಯ ವರ್ತಕ ಕೇಶವರಾವ್ ಎಂಬುವವರ ಕಾರು ರಿಪ್ಪನ್‌ಪೇಟೆ ಸಮಯದ ಸೂಡೂರು ಬಳಿ ಇಂದು ಸಂಜೆ 5 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿ ಕೇಶವರಾವ್ ಹಾಗೂ ಅವರ ಪುತ್ರಿ ರೇಷ್ಮಾ ರವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ವೇಳೆ ಮಳೆ ಬರುತ್ತಿದ್ದ ಕಾರಣ ಕಾರು ಚಲಾಯಿಸುತ್ತಿದ್ದ ಕೇಶವರಾವ್ ಅವರಿಗೆ ನಿಯಂತ್ರಣ ತಪ್ಪಿದ ಕಾರಣ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಕೇಶವರಾರ್ ಹಾಗೂ ಅವರ ಪುತ್ರಿ ರೇಷ್ಮಾ ರವರಿಗೆ ಗಾಯವಾಗಿದ್ದು ಕಾರಿನಲ್ಲಿದ್ದ ಅವರ ಅಳಿಯ ಅಪಾಯದಿಂದ ಪಾರಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು..!

ರಿಪ್ಪನ್‌ಪೇಟೆ ಸಮೀಪದ ಕೋಡೂರು ಎಂಬಲ್ಲಿ ಗುರುವಾರ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ತಲೆಗೆ ತೀವ್ರತರವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯಳಗಲ್ಲಿನ ಚೂಡಾಮಣಿ (35) ಇಂದು ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕೃಷಿ ಕೆಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತ ಪೇಟೆ, ಪಟ್ಟಣದ ಕಡೆ ಹೋಗುವುದು ಬಹಳ ಅಪರೂಪವಾಗಿತ್ತು‌ ಎಂದು ತಿಳಿದುಬಂದಿದೆ.

ಮೃತನು ತಂದೆ, ತಾಯಿ, ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಜಾಹಿರಾತು

LEAVE A REPLY

Please enter your comment!
Please enter your name here