ಸೆ.26 ರಿಂದ ಅ.5 ರವರೆಗೆ ರಿಪ್ಪನ್‌ಪೇಟೆ, ಹೊಂಬುಜ, ಅಲಸೆ, ಅಮ್ಮನಘಟ್ಟ, ಕೋಣಂದೂರು ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

0
167

ರಿಪ್ಪನ್‌ಪೇಟೆ: ಜೈನರ ದಕ್ಷಿಣ ಕಾಶಿ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಜಗನ್ಮಾತೆ ಪದ್ಮಾವತಿ ದೇವಿ ಮತ್ತು
ರಿಪ್ಪನ್‌ಪೇಟೆಯ ಸಿದ್ದಿವಿನಾಯಕ ದೇವಸ್ಥಾನದ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ, ಅಲಸೆ ಶ್ರೀಚಂಡಿಕೇಶ್ವರಿ ದೇವಸ್ಥಾನದಲ್ಲಿ, ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಹಾಗೂ ಕೋಣಂದೂರು ಶ್ರೀಬಸವಣ್ಣ ದೇವಸ್ಥಾನದ ದೇವರ ಸನ್ನಿಧಾನದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಶರನ್ನವರಾತ್ರಿ ಉತ್ಸವ ಮತ್ತು ವಿವಿಧ ಅಲಂಕಾರ ಪೂಜೆ ಹಾಗೂ ನವಚಂಡಿಕಾ ಹೋಮ ಸಾಮೂಹಿಕ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.26 ರಂದು ಶರನ್ನವರಾತ್ರಿ ಆರಂಭದ ದಿನದಿಂದ ಪ್ರಾತಃಕಾಲ ಪೂಜೆ ಚಂಡಿಕಾ ಪಾರಾಯಣ ಮಹಾಪೂಜೆ ಮಂಗಳಾರತಿ, ಸೆ.29 ರಂದು ಸಂಜೆ ಸಾಮೂಹಿಕ ರಂಗಪೂಜೆ, ಅ.5 ರಂದು ಉದಯ ಪೂಜೆ, ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ ವಾಚನ, ಮಂಡಲ ದರ್ಶನ, ಋತ್ವಿಗ್ ವರ್ಣನೆ, ನವಚಂಡಿಕಾ ಹೋಮ ಪೂರ್ಣಾಹುತಿ ತೀರ್ಥ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ. ಸಂಜೆ 4 ಗಂಟೆಗೆ ಬನ್ನಿಪೂಜೆ ಶ್ರೀ ದೇವರ ರಥೋತ್ಸವವು ಜರಗುವುದು.

ಹೊಂಬುಜ:

ಅತಿಶಯ ಮಹಾಕ್ಷೇತ್ರದಲ್ಲಿ ಸೆ.26 ರಿಂದ ಅ.5 ರವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ಪೂಜಾ ಮಹೋತ್ಸವವು ಭಗವಾನ್ ಪಾರ್ಶ್ವನಾಥಸ್ವಾಮಿ ಮತ್ತು ಜಗನ್ಮಾತೆ ಪದ್ಮಾವತಿ ಅಮ್ಮನವರ ಮಹಾಸನ್ನಿಧಿಯಲ್ಲಿ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ನಹಾಸ್ವಾಮಿಗಳ ನೇತೃತ್ವದಲ್ಲಿ ಪರಂಪರೆಯಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಯೋಜಿಸಲಾಗಿದೆ.
ಸೆ.26 ರಂದು ಶರನ್ನವರಾತ್ರಿ ಉತ್ಸವ ಘಟಸ್ಥಾಪನೆ, ಮಹಾನೈವೇದ್ಯ ಪೂಜೆ, ಅ.2 ರಂದು ಸರಸ್ವತಿ, ಅ.3 ರಂದು
ಜೀವದಯಾಷ್ಟಮಿ, ಅ.4 ರಂದು ಆಯುಧ ಪೂಜೆ ಮತ್ತು ಮಹಾನವಮಿ, ಅ.5 ರಂದು ವಿಜಯದಶಮಿ ಉತ್ತವ, ಶ್ರೀಮಹಾದೇವಿ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here