ಸೇಡು ಬಿಡದ ಕೋತಿ: 22 ಕಿ.ಮೀ‌. ನಿಂದ ಲಾರಿ ಏರಿ ಮತ್ತದೇ ಜಾಗಕ್ಕೆ ಬಂತು! ರೇಗಿಸಿದವನಿಗೆ ಕಾದಿದ್ಯ ಗ್ರಹಚಾರ?

0
2474

ಮೂಡಿಗೆರೆ: ಇತ್ತೀಚೆಗೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಆಟೋ ಚಾಲಕ ತನ್ನನ್ನು ರೇಗಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಕೋತಿಯೊಂದು ದಾಳಿ ಮಾಡಿತ್ತು. ಇದರಿಂದ ಗಾಬರಿಗೊಂದ ಅರಣ್ಯ ಸಿಬ್ಬಂದಿ ಆ ಕೋತಿಯನ್ನು 22 ಕಿ.ಮೀ. ದೂರದಲ್ಲಿನ ಚಾರ್ಮಾಡಿ ಘಾಟಿಯ ದಟ್ಟಾರಣ್ಯದಲ್ಲಿ ಬಿಡಲಾಗಿತ್ತು.

ಕಳೆದ ಸೆಪ್ಟೆಂಬರ್ 16 ರಂದು ಕೊಟ್ಟಿಗೆಹಾರ ಸಮೀಪದ ತುರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿಯನ್ನು ಹಿಡಿಯಲು ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಆಟೋ ಚಾಲಕ ಕೂಡ ಹೋಗಿ ಕೋತಿಯನ್ನು ರೇಗಿಸಿದ್ದರು. ಇದರಿಂದ ರೊಚ್ಚಿಗೆದ್ದ ಕೋತಿ ಆತನ ಕೈ ಕಚ್ಚಿ ದಾಳಿ ಮಾಡಿತ್ತು.

ಇದಾದ ನಂತರ ತನ್ನ ಸೇಡನ್ನು ಬಿಡದ ಕೋತಿ ಅವನನ್ನು ಹುಡುಕಿಕೊಂಡು ಆಟೋ ನಿಲ್ದಾಣಕ್ಕೆ ಬಂದು ಅವನ ಆಟೋ ಟಾಪ್ ಕಿತ್ತು ಹಾಕಿತ್ತು ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು 18 ಗಂಟೆ ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿದು ಕೋತಿಯನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿ ಬಂದಿದ್ದರು.

ಇದೀಗ ಮತ್ತೆ ಗೊಬ್ಬರದ ಲಾರಿ ಏರಿ ಕೊಟ್ಟಿಗೆಹಾರಕ್ಕೆ ಕೋತಿ ಮೆಂಟ್ರಿ ಕೊಟ್ಟಿದೆ. ಇದನ್ನು ಕಂಡ ಸಾರ್ವಜನಿಕರು ಮತ್ತೆ ಗಾಬರಿಗೊಂಡಿದ್ದು, ಇನ್ನು ಆ ಆಟೋ ಚಾಲಕನಿಗೇನು ಗ್ರಹಚಾರ ಕಾದಿದೆಯೋ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

ಜಾಹಿರಾತು

LEAVE A REPLY

Please enter your comment!
Please enter your name here