ತೀರ್ಥಹಳ್ಳಿ: ಸೇವಾವಧಿಯ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕ ಗೌರವವನ್ನು ತೀರ್ಥಹಳ್ಳಿ ಮೂಲದ ಪೊಲೀಸ್ ಅಧಿಕಾರಿಯಾದ ಎಂ.ಎ. ನಟರಾಜ್ ಪಡೆದಿದ್ದಾರೆ.
ಎಂ.ಎ ನಟರಾಜ್ ಅವರು ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳದ ಅಣ್ಣಪ್ಪಗೌಡ ಮತ್ತು ಕಮಲಮ್ಮ ರವರ ಪುತ್ರರಾಗಿದ್ದು, ತಮ್ಮ ಸೇವಾವಧಿಯಲ್ಲಿ ಅತ್ಯುತ್ತಮ ಸೇವೆ ಮೂಲಕ ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಿರುವ ಇವರು ಶೃಂಗೇರಿ, ಸಾಗರ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಮಂಗಳೂರಿನ ಸುರತ್ಕಲ್ ನಲ್ಲಿ ಪಿಎಸ್ಐ, ಸಿಪಿಐ ಆಗಿ ಸೇವೆ ಸಲ್ಲಿಸಿ,
ಅಪಾರ ಸಾರ್ವಜನಿಕ ಮನ್ನಣೆಗಳಿಸಿದ್ದರು.
ಅನೇಕ ಅಪರಾಧ ಪ್ರಕರಣಗಳನ್ನು ಭೇದಿಸಿ ಖಡಕ್ ಪೊಲೀಸ್ ಅಧಿಕಾರಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
ಜನರೊಂದಿಗೆ ಸರಳವಾಗಿ ಬರೆಯುವ ಮನೋಭಾವದ ಇವರು ಜನಸ್ನೇಹಿ ಪೊಲೀಸ್ ಆಗಿಯೂ ಹೆಸರು ಪಡೆದಿದ್ದು ಉಲ್ಲೇಖಾರ್ಹ ಮತ್ತು ಅಭಿನಂದನೀಯ.
ಪ್ರಸ್ತುತ ಮಂಗಳೂರಿನ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಚಾರಿ ವಿಭಾಗದ ಅನೇಕ ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳಿಗೆ ಸುಧಾರಣೆ ತಂದು ಅನೇಕ ಬದಲಾವಣೆ, ಮಂಗಳೂರಿನಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.
ಎಂ.ಎ ನಟರಾಜ್ ಅವರಿಗೆ ಅವರ ಪೊಲೀಸ್ ಇಲಾಖೆಯಲ್ಲಿನ ಗುರುತರ ಸೇವೆಗಾಗಿ ಮುಖ್ಯಮಂತ್ರಿ ಪದಕ ಗೌರವ ಸಿಕ್ಕಿರುವುದಕ್ಕೆ ಅವರ ಅಪಾರ ಸ್ನೇಹಿತರು, ಅಭಿಮಾನಿಗಳು, ಬಂಧುಗಳು, ಇಲಾಖಾ ಅಧಿಕಾರಿಗಳು ಶುಭ ಹಾರೈಸಿದ್ದಾರೆ.