ಸೈದೂರು ಗ್ರಾಪಂ ಅಧ್ಯಕ್ಷರಾಗಿ ಭೈರಪ್ಪ ಅವಿರೋಧ ಆಯ್ಕೆ

0
148

ಸಾಗರ: ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದ ತಡಗಳಲೆ ವಿನಯ ಗೌಡ ಹೃದಯಾಘಾತದಿಂದ ನಿಧನರಾಗಿದ್ದ ಹಿನ್ನಲೆಯಲ್ಲಿ ತೆರವಾಗಿದ್ದ ಸೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಭೈರಪ್ಪರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸೈದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಕಡಸೂರು ಶಿವಕುಮಾರ್ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಸದಾನಂದ ಮಾರುತಿ ನಗರ ಅಧ್ಯಕ್ಷರು ಬಿಜೆಪಿ ತಾಳಗುಪ್ಪ ಹೋಬಳಿ, ರಾಜಶೇಖರ್ ಗಾಳಿಪುರ ನಿಕಟ ಪೂರ್ವ ಜಿಲ್ಲಾಪಂಚಾಯತ್ ಸದಸ್ಯರು, ಮಹಾಬಲೇಶ್ವರ ತಡಗಳಲೆ, ಪರಮೇಶ್ವರ್ ಬರದವಳ್ಳಿ, ಸೈದೂರು ಲಿಂಗರಾಜ್ ಗೌಡ್ರು, ಜಯಂತ್ ಸೈದೂರು, ಉಮೇಶ್ ಹಿರೇನೆಲ್ಲೂರು, ಕುಗ್ವೆ ವಿಶ್ವನಾಥ್ ಇನ್ನಿತರ ಮುಖಂಡರು ನೂತನವಾಗಿ ಸೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಭೈರಪ್ಪ ರವರಿಗೆ ಅಭಿನಂಧಿಸಿದರು.

ವರದಿ: ಓಂಕಾರ ಎಸ್. ವಿ. ತಾಳಗುಪ್ಪ
ಜಾಹಿರಾತು

LEAVE A REPLY

Please enter your comment!
Please enter your name here