ಸೊನಲೆ ಪಿಡಿಓ ಸಂತೋಷ್‌ರವರನ್ನು ಬೇರೆಡೆಗೆ ವರ್ಗಾಯಿಸದಿರಲು ಗ್ರಾಮಸ್ಥರಿಂದ ಇಒಗೆ ಒತ್ತಾಯ

0
1300

ಹೊಸನಗರ: ಹೊಸನಗರ ತಾಲ್ಲೂಕು ಸೊನಲೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅತ್ಯುತ್ತಮವಾಗಿ ಆಡಳಿತ ನಡೆಸಿಕೊಂಡು ಬರುತ್ತಿರುವ ಪಿಡಿಓ ಎಂ.ಆರ್ ಸಂತೋಷರವರನ್ನು ರಾಜಕೀಯ ಒತ್ತಡ ಹಾಗೂ ಅಲ್ಲಿನ ಕೆಲವು ಗುತ್ತಿಗೆದಾರರು ಅವರ ಕಳಪೆ ಕಾಮಾಗಾರಿಗೆ ಬಿಲ್ ನೀಡಿಲ್ಲವೆಂದು ಆಪಾದಿಸಿ ಅವರ ಮೇಲೆ ಇಲ್ಲ ಸಲ್ಲದ ದೂರು ನೀಡಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಸಂತೋಷರವರನ್ನು ಯಾವುದೇ ಕಾರಣಕ್ಕೂ ನಮ್ಮ ಸೊನಲೆ ಗ್ರಾಮ ಪಂಚಾಯಿತಿಯಿಂದ ಬೇರೆಡೆಗೆ ವರ್ಗಾವಣೆ ಅಥವಾ ನಿಯೋಜನೆ ಮಾಡಬಾರದೆಂದು ಸೊನಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ರವರಿಗೆ ಇಂದು ಗಾಂಧಿ ಜಯಂತಿಯ ದಿನ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಎನ್‌ಜಿಎನ್‌ಆರ್‌ಇಜಿಎ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಾಗಾರಿಗಳನ್ನು ಮಾಡಿ ಗ್ರಾಮದ ಅಭಿವೃದ್ಧಿ ಮಾಡಿದ್ದಾರೆ ಇದೆಲ್ಲವೂ ಕೊಡ ಸಾಧ್ಯವಾಗಿದ್ದು ಗ್ರಾಮ ಪಂಚಾಯಿತಿ ಪಿಡಿಓ ಸಂತೋಷರವರ ಪ್ರಾಮಾಣಿಕ ದಕ್ಷ ಹಾಗೂ ಜನಪರ ಸೇವೆಯೇ ಕಾರಣ ಸೊನಲೆ ಗ್ರಾಮದಲ್ಲಿ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯದ ಯಾವುದೇ ಕುಟುಂಬಗಳು ಇರುವುದಿಲ್ಲ. ಇಂತಹ ಅಧಿಕಾರಿಯ ವಿರುದ್ಧ ಕೆಲವು ಭೂ ಕಬಳಿಕೆದಾರರು ಸಂಚು ರೂಪಿಸಿ ಅವರನ್ನು ವರ್ಗಾವಣೆಮಾಡುವಂತೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ ಅಲ್ಲದೇ ಪಿಡಿಓ ವಿರುದ್ಧ ಷಡ್ಯಂತ್ರ ಮಾಡಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ ಅವರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಬೆಡರಿಕೆ ಹಾಕುತ್ತಿದ್ದಾರೆ ಆದರೆ ಯಾವುದೇ ಕಾರಣಕ್ಕೂ ಎಂ.ಆರ್ ಸಂತೋಷರವರನ್ನು ಸೊನಲೆ ಗ್ರಾಮದಿಂದ ವರ್ಗಹಿಸಬಾರದು ಆಕಸ್ಮಾತಾಗಿ ವರ್ಗಹಿಸಿದ್ದಲ್ಲಿ ಸೊನಲೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಗ್ರಾಮ ಪಂಚಾಯಿತಿಯ ಎದುರು ಧರಣಿ ನಡೆಸುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಸಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌, ಸಂತೋಷ್‌ರವರು ನನಗೆ ಆರೋಗ್ಯದ ನೆಪವೊಡ್ಡಿ ರಜೆ ಕೇಳಿರುತ್ತಾರೆ ನಂತರ ಸೊನಲೆ ಗ್ರಾಮ ಪಂಚಾಯಿತಿಯಿಂದ ನಿಯೋಜನೆಗೊಳಿಸಿ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದು ಅವರನ್ನು ಕರೆಸಿ ಮನ ಒಲಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಕೆ ವಿಜೇಂದ್ರ ಗೌಡ, ಸುರೇಶ, ಸತೀಶ, ಸುಬ್ರಾಯ, ಪ್ರಭಾಕರ್ ಗೌಡ, ವೆಂಕಟಪ್ಪ, ದೇವಪ್ಪ, ಗಂಗಾಧರ್, ಧರ್ಮಪ್ಪ, ಕೃಷ್ಣಮೂರ್ತಿ ಸುಕೇಶ್ ಇನ್ನೂ ಮುಂತಾದ ಸೊನಲೆ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here