ಸೌಜನ್ಯಯುತ ನಡವಳಿಕೆಯಿಂದ ಗೆಲುವಿನ ವಿಶ್ವಾಸ: ಎಂ.ಕೆ ಪ್ರಾಣೇಶ್

0
144

ಚಿಕ್ಕಮಗಳೂರು : ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ, ಒಳಗೊಂಡಂತೆ ಎಲ್ಲಾ ಮತದಾರರ ಬೆಂಬಲದಿಂದ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾವಿದೆ ಎಂದು ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಪರಿಷತ್ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದು, ಮತ್ತಷ್ಟು ಸೇವೆ ಮಾಡಲು ಸದಸ್ಯನಾಗಿ ಆಯ್ಕೆ ಮಾಡುವಂತೆ ವಿನಂತಿಸಿಕೊಂಡರು.

ಪಕ್ಷಾತೀತವಾಗಿ ನಡೆದುಕೊಂಡಿದ್ದು, ಸದಸ್ಯರು, ಅಧ್ಯಕ್ಷರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡಿದ್ದೇನೆ. ಯಾವುದೇ ಪಕ್ಷ ಬೇಧವಿಲ್ಲದೇ 196 ಗ್ರಾಮಪಂಚಾಯಿತಿಗಳಿಗೆ ಜನರೇಟರ್ ವಿತರಣೆಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸದಸ್ಯರಿಗೆ ಗೌರವ ಧನವನ್ನು 1000ಕ್ಕೆ ಏರಿಕೆ ಮಾಡಲಾಗಿತ್ತು. 1500 ಏರಿಕೆ ಮಾಡುವ ಸಂಬಂಧ ಸಚಿವರೊಂದಿಗೆ ಚರ್ಚಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಶಾಸಕರಾದ ಬೆಳ್ಳಿಪ್ರಕಾಶ್, ಡಿ.ಎಸ್.ಸುರೇಶ್, ಎಂ.ಪಿ. ಕುಮಾರಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಮುಗುಳುವಳ್ಳಿನಿರಂಜನ್, ಹೆಚ್.ಡಿ.ತಮ್ಮಯ್ಯ, ವರಸಿದ್ದಿವೇಣುಗೋಪಾಲ್, ಪ್ರೇಮ್‌ಕುಮಾರ್, ದೇವರಾಜ್‌ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here