23.2 C
Shimoga
Sunday, November 27, 2022

ಸ್ನೇಹಿತನನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೈದು ಚಿನ್ನಾಭರಣ ದೋಚಿದ್ದ ತೀರ್ಥಹಳ್ಳಿ ಮೂಲದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 2 ಲಕ್ಷ ದಂಡ !

ಶಿವಮೊಗ್ಗ : ಗುಡ್ಡಕ್ಕೆ ಸ್ನೇಹಿತನನ್ನು ಕರೆದುಕೊಂಡು ಹೋಗಿ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೈದು ಚಿನ್ನಾಭರಣ ದೋಚಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ 2 ಲಕ್ಷ ರೂ. ದಂಡ ವಿಧಿಸಿ ಕೋರ್ಟ್‌ ತೀರ್ಪು ನೀಡಿದೆ‌.

ಏನಿದು ಘಟನೆ ?

2013 ಜೂ.06 ರಂದು ತೀರ್ಥಹಳ್ಳಿಯ ವಾಟಗಾರು ಗ್ರಾಮದ ವಾಸಿ ಭುಜಂಗ @ ಪಾನ್ ಈತ ಮಳಲಿಮಕ್ಕಿ ಗ್ರಾಮದ ವಾಸಿ ನಾಗರಾಜ್ (35) ರವರನ್ನು ಕೆಸಿನಮನೆ ಅಭಯಾರಣ್ಯದ ಗುಡ್ಡಕ್ಕೆ ಕರೆಸಿಕೊಂಡು ತನ್ನ ಬಳಿ ಇದ್ದ ಪರವಾನಿಗೆ ಇಲ್ಲದ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ, ಆತನ ಬಳಿ ಇದ್ದ ಬೈಕ್, ನಗದು ಹಣ, ಬಂಗಾರದ ಚೈನ್ ಮತ್ತು ಉಂಗುರವನ್ನು ತೆಗೆದುಕೊಂಡು ಹೋದ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಆಗಿನ ತನಿಖಾಧಿಕಾರಿಗಳಾದ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಓಂಕಾರ್ ನಾಯ್ಕ್ ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕರಾದ ಪುಷ್ಪ ಪ್ರಕರಣದ ವಾದ ಮಂಡಿಸಿದ್ದು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಬಿ.ಆರ್ ಪಲ್ಲವಿ ರವರು ಸೋಮವಾರ ಆರೋಪಿ ತೀರ್ಥಹಳ್ಳಿಯ ವಾಟಗಾರು ಗ್ರಾಮದ ಹುಲಿಮನೆ ವಾಸಿ ಭುಜಂಗ @ ಪಾನ್ @ ಭುಜಂಗಪೂಜಾರಿ (43) ಈತನ ವಿರುದ್ಧ ಕಲಂ 302 ಮತ್ತು ಕಲಂ 7, 25 Arms act ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 01 ವರ್ಷ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!