ಸ್ನೇಹಿತನ ಕ್ಯಾಂಟೀನ್’ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಟೀ ಸೇವಿಸಿದ ಮಾಜಿ ಶಾಸಕ ಮಧು ಬಂಗಾರಪ್ಪ ! ಅದ್ರಲ್ಲೇನು ವಿಶೇಷ ಅಂದ್ರ ?

0
1382

ಸೊರಬ: ಸದಾ ಸರಳತೆ, ಜನ ಸಾಮಾನ್ಯರೊಂದಿಗೆ ಸಾಮಾನ್ಯ ವ್ಯಕ್ತಿಯಾಗಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ತಾಲೂಕಿನ ಆನವಟ್ಟಿಯ ಬಾವ ಕ್ಯಾಂಟೀನ್ ಗೆ ತೆರಳಿ ಟೀ ಸೇವಿಸಿದ್ದಾರೆ.

ಅಂದ ಹಾಗೆ ಇದರಲ್ಲೇನು ವಿಶೇಷ ಅಂದ್ರೆ, ಕುಬಟೂರು ಗ್ರಾಮದ ನಾಗರಾಜ್ ಅವರು ಮಧು ಬಂಗಾರಪ್ಪ ಅವರಿಗೆ ಸ್ನೇಹಿತರು ಹೌದು. ಸ್ನೇಹ ಎಂಬುದು ಆಸ್ತಿ, ಅಂತಸ್ತುಗಳನ್ನು ಹೊಂದಿದ್ದಲ್ಲ. ಸ್ನೇಹ ಅಮೂಲ್ಯ ಎಂಬುದನ್ನು ತೋರಿಸುವ ಜೊತೆಗೆ ಸ್ನೇಹಿತನಿಗೆ ಶುಭ ಹಾರೈಸಿ, ಅಲ್ಲಿಯೇ ಟೀ ಸೇವಿಸುವ ಮೂಲಕ ಮತ್ತೊಮ್ಮೆ ಮಧು ಬಂಗಾರಪ್ಪ ಅವರು ಸರಳತೆ ಮತ್ತು ಸಾಮಾನ್ಯ ವ್ಯಕ್ತಿ ಎಂಬುದನ್ನು ಬೆಳಕಿಗೆ ಬಂದಿದೆ.

ಮಧು ಬಂಗಾರಪ್ಪ ಅವರಿಗೆ ಕೆಪಿಸಿಸಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾದ ತರುವಾಯವಂತೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಬಿಡುವಿನ ವೇಳೆ ಆಪ್ತರ, ಕಾರ್ಯಕರ್ತರ ಶುಭ ಕಾರ್ಯಕ್ರಮಗಳಿಗೆ ಭೇಟಿ ನೀಡುವುದು. ನೂತನ ವಧು ವರರಿಗೆ ಹಾರೈಸುವುದು, ಪಕ್ಷ ಸಂಘಟನೆಯಲ್ಲಿ ತೊಡಗಿದ ಹಿರಿಯ ಕಿರಿಯ ಕಾರ್ಯಕರ್ತರು ನಿಧನರಾದಾಗ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದು ಮಾಡುತ್ತಿದ್ದಾರೆ.

ಆದರೆ, ಸ್ನೇಹಿತನೊಬ್ಬನ ಕ್ಯಾಂಟೀನ್ ನಲ್ಲಿ ಕುಶಲೋಪರಿ ವಿಚಾರಿಸಿ ಸಾಮಾನ್ಯ ವ್ಯಕ್ತಿಯಂತೆ ಮಧು ಬಂಗಾರಪ್ಪ ಅವರು ಟೀ ಸೇವಿಸುತ್ತಿರುವುದು ಜನತೆಯಿಂದ ಮೆಚ್ಚುಗೆಯಾಗಿದ್ದು, ಇದೀಗ ಟೀ ಸೇವಿಸುವ ಪೋಟೋ ಸಾಕಷ್ಟು ವೈರಲ್ ಆಗಿದೆ.

ವರದಿ: ಚಂದ್ರಪ್ಪ ಟಿ.
ಜಾಹಿರಾತು

LEAVE A REPLY

Please enter your comment!
Please enter your name here