ಎನ್.ಆರ್ ಪುರ: ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾದ ಘಟನೆ ತಾಲೂಕಿನ ಮಾರಿದಿಬ್ಬ ಬಳಿ ನಡೆದಿದೆ.
ಸಲ್ಮಾನ್ (18) ನೀರು ಪಾಲಾಗಿರುವ ಯುವಕ. ಈತ ಸ್ನೇಹಿತರ ಜೊತೆ ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದಾಗ ನೀರುಪಾಲಾಗಿದ್ದಾನೆ. ಯುವಕ ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಕಾಣೆಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆ ಸಂಬಂಧ ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related