20.6 C
Shimoga
Friday, December 9, 2022

ಸ್ಮಶಾನದ ಜಾಗಕ್ಕಾಗಿ ನ. 28ರಿಂದ ತಾಲ್ಲೂಕು ಕಛೇರಿ ಎದುರು ಅನಿರ್ದಿಷ್ಟ ಧರಣಿ ; ರಾಮಣ್ಣ ಅಸಲಾರು


ಹೊಸನಗರ: ತಾಲ್ಲೂಕಿನ ಹುಂಚ ಹೋಬಳಿ ಹಿರಿಯೋಗಿ ಗ್ರಾಮದ ಸರ್ವೆನಂಬರ್ 16ರ ಅರಣ್ಯ ಭೂಮಿ ನಮ್ಮ ಪುರಾತನ ಕಾಲದಿಂದಲ್ಲೂ ಸ್ಮಶಾನ ಆಗಿದ್ದು ಆ ಜಾಗವನ್ನು ಬಲಾಢ್ಯರ ವಶಕ್ಕೆ ಪಡೆದುಕೊಂಡಿದ್ದು ಅದನ್ನು ತಕ್ಷಣ ಬಿಡಿಸಿಕೊಡಬೇಕು ಇಲ್ಲವಾದರೆ ನವೆಂಬರ್ 28 ಸೋಮವಾರ ಹೊಸನಗರ ತಾಲ್ಲೂಕು ಕಛೇರಿಯ ಆವರಣದ ಎದುರು ಅನಿರ್ದಿಷ್ಟ ಕಾಲ ಧರಣಿ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ತಕ್ಷಣ ಸ್ಮಶಾನದ ಜಾಗವನ್ನು ಬಿಡಿಸಿಕೊಡಬೇಕೆಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ರಾಜ್ಯ ಒಕ್ಕೂಟದ ಸಂಚಾಲಕರಾದ ರಾಮಣ್ಣ ಅಸಲಾರುರವರು ತಹಶೀಲ್ದಾರ್‌ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.


ಈ ಜಾಗ ಹಿಂದೆ ಅರಣ್ಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಲಾಗಿದ್ದು ನಮ್ಮ ಎಸ್‌ಟಿ ಸಮುದಾಯ ನೂರಾರು ವರ್ಷಗಳ ಕಾಲದಿಂದ ಸರ್ವೆನಂಬರ್ 16ರಲ್ಲಿ ಸ್ಮಶಾನವನ್ನಾಗಿ ಮಾಡಿ ಸ್ಮಶಾನಕ್ಕಾಗಿ ಉಪಯೋಗಿಸುತ್ತಾ ಬಂದಿದ್ದು ಅಲ್ಲಿನ ಬಲಾಢ್ಯ ನಿವಾಸಿಗಳು ನಮ್ಮ ಸ್ಮಶಾನ ಜಾಗವನ್ನು ತಮ್ಮ ಸ್ವಾಧೀನ ಪಡೆದುಕೊಂಡು ಸುತ್ತ ತಂತಿ ಬೇಲಿ ನಿರ್ಮಾಣ ಮಾಡಿಕೊಂಡು ಸ್ಮಶಾನಕ್ಕೆ ಹೋಗಲು ಬಿಡುತ್ತಿಲ್ಲ ಈ ಹಿಂದೆ ಜಿಪಿಎಸ್ ಸಹ ಅರಣ್ಯ ಇಲಾಖೆ ಮಾಡಿದ್ದು ಯಾವುದೇ ಕಾರಣಕ್ಕೂ ಸ್ಮಶಾನ ಜಾಗಕ್ಕೆ ಹೋಗಲು ಬಲಡ್ಯರು ಬೀಡುತ್ತಿಲ್ಲ ತಕ್ಷಣ ಅಲ್ಲಿನ ಎಸ್.ಟಿ ಜನಾಂಗದವರಿಗೆ ನ್ಯಾಯ ಕೊಡಿಸಬೇಕು ಇಲ್ಲವಾದರೆ ನವೆಂಬರ್ 28 ರಿಂದ ತಾಲ್ಲೂಕು ಕಛೇರಿಯ ಎದುರು ನಮ್ಮ ಸಂಘದ ವತಿಯಿಂದ ಅನಿರ್ದಿಷ್ಟ ಕಾಲ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಜನಾಂಗದ ಸಂಚಾಲಕರಾದ ಸುಧಾಕರ್‌ ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!