ಸ್ಯಾಮುಯೆಲ್ ಜೇಕಬ್‌ಗೆ ರ‍್ಯಾಲಿ ಚಾಂಪಿಯನ್ ಶಿಪ್

0
256

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ದಿ ಮೋಟರ್ಸ್ ಸ್ಪೋರ್ಟ್ಸ ಕ್ಲಬ್ ಚಿಕ್ಕಮಗಳೂರು ಸಹಯೋಗದಲ್ಲಿ ನಡೆದ ದ್ವಿಚಕ್ರ ವಾಹನಗಳ ರಾಷ್ಟೀಯ ರ‍್ಯಾಲಿ ಚಾಂಪಿಯನ್ ಶಿಪ್‌ನ್ನು ಹೊಸೂರಿನ ಸ್ಯಾಮುಯೆಲ್ ಜೇಕಬ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಜೇಕಬ್ 53 ನಿಮಿಷ 56 ಸೆಕೆಂಡುಗಳಲ್ಲಿ ಗುರಿ ತಲುಪಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡರು. ಬೆಂಗಳೂರಿನ ಅಬ್ದುಲ್ ವಾಹಿದ್ ತನ್ವೀರ್, ಮೈಸೂರಿನ ಇಮ್ರಾನ್ ಪಾಷ ಮೂರನೇ ಸ್ಥಾನ ಪಡೆದುಕೊಂಡರು.

ಸೂಪರ್ ಬೈಕ್ ಪ್ರೋ ಎಕ್ಸ್ಪರ್ಟ್ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ವಾಹಿದ್ ತನ್ವಿರ್ ಮೊದಲಿಗರಾದರು. ಅವರು 54ನಿಮಿಷ 02ಸೆಕೆಂಡುಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು. ಬೆಂಗಳೂರಿನ ಆರ್. ನಟರಾಜ್ ಹಾಗೂ ಗೌತಮ್‌ರಾವ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿಸಿದರು.

ಸೂಪರ್ ಬೈಕ್ ಎಕ್ಸ್ಪರ್ಟ್-ಎ ವಿಭಾಗದಲ್ಲಿ ನಾಗಪುರದ ಅಮಾನ್ ಪ್ರಭಾಕರ್ ಪಾವ್ಡೆ 57 ನಿಮಿಷದಲ್ಲಿ ಗುರಿ ತಲುಪಿ ಮೊದಲಿಗರಾದರು. ಚಿಕ್ಕಮಗಳೂರಿನ ಅಸಾದ್ ಖಾನ್ ಹಾಗೂ ನಾಗಪುರದ ಜತಿನ್‌ಜೈನ್ ಎರಡು ಮತ್ತು ಮೂರನೇ ಸ್ಥಾನಗಳಿಸಿದರು. ಸೂಪರ್ ಸ್ಪೋರ್ಟ್ 130 ವಿಭಾಗದಲ್ಲಿ ಕೇರಳದ ಅಜಿನ್ ಅಬ್ರಾಹಂ ಪ್ರಥಮ, ಕೊಟ್ಟಾಯಂ ಚಲಸ್ ನಬೋಸ್ ದ್ವಿತೀಯ ಹಾಗೂ ಮಂಗಳೂರಿನ ನಿತೇಶ್ ಪೂಜಾರಿ ತೃತೀಯ ಸ್ಥಾನಪಡೆದರು.

ಸೂಪರ್ ಸ್ಪೋಟ್ಸ್ 165ವಿಭಾಗದಲ್ಲಿ ಬೆಂಗಳೂರಿನ ಬಿ. ಕೆ.ಪವನ್ ಪ್ರಥಮ, ಕೊಯಮ ತ್ತೂರಿನ ಶಶಿಕುಮಾರ್ ದ್ವಿತೀಯ ಹಾಗೂ ಶಿವಮೊಗ್ಗದ ಅಬ್ರಾರ್ ಪಾಶ ಮೂರನೇ ಸ್ಥಾನ ಗಳಿಸಿದ್ದಾರೆ. ಸೂಪರ್ ಸ್ಪೋಟ್ಸ್ 260 ವಿಭಾಗದಲ್ಲಿ ಹೊಸೂರಿನ ಸ್ಯಾಮುಯೆಲ್ ಜೇಕೆಬ್ ಪ್ರಥಮ, ಮೈಸೂರಿನ ಇಮ್ರಾನ್ ಪಾಶ ದ್ವಿತೀಯ ಹಾಗೂ ಹೊಸೂರಿನ ಸಚಿನ್ ಮೂರನೇ ಸ್ಥಾನಗಳಿಸಿದ್ದಾರೆ. ಸೂಪರ್ ಸ್ಪೋಟ್ಸ್ 400ವಿಭಾಗದಲ್ಲಿ ಪುತ್ತೂರಿನ ಆಕಾಶ್ ಐತಾಳ್, ಸೂಪರ್ ಸ್ಪೋಟ್ಸ್ 550 ವಿಭಾಗದಲ್ಲಿ ಬೆಂಗಳೂರಿನ ಮೊಹಮದ್ ಜಹೀರ್ ಮೊದಲಿಗ ರಾಗಿದ್ದಾರೆ. ಮಹಿಳಾ ವಿಭಾದಲ್ಲಿ ಬೆಂಗಳೂರಿನ ಐಶ್ವರ್ಯ ಪಿಸ್ಸೆಲ್ 1ಗಂಟೆ 4 ನಿಮಿಷದಲ್ಲಿ ಗುರಿ ತಲುಪಿ ಮೊದಲಿಗರಾಗಿದ್ದಾರೆ. ಸತಾರಾದ ತನಿಕ್ ಶಾನ್‌ಭಾಗ್ ದ್ವಿತೀಯ ಹಾಗೂ ಮಂಗಳೂರಿನ ಬಿ. ಅಪೂರ್ವ ತೃತೀಯ ಸ್ಥಾನಗಳಿಸಿದ್ದಾರೆ. ಸ್ಟಾರ್ ಆಫ್ ಕರ್ನಾಟಕ ವಿಭಾಗದಲ್ಲಿ ಮಂಗಳೂರಿನ ಅದ್ನಾನ್ ಅಹಮದ್ ಪ್ರಥಮ, ಚಿಕ್ಕಮಗಳೂರಿನ ಪಿ. ವಿ. ಫ್ರಾನ್ಸಿಸ್ ದ್ವಿತೀಯ ಹಾಗೂ ಚಿಕ್ಕಮಗಳೂರಿನ ಎನ್. ಸೂರಜ್ ತೃತೀಯ ಸ್ಥಾನಗಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here