ಸ್ವಧರ್ಮದಲ್ಲಿ ನಿಷ್ಠೆ, ಪರ ಧರ್ಮದಲ್ಲಿ ಸಹಿಷ್ಣುತಾ ಭಾವವನ್ನು ಹೊಂದಿರುವ ದೇಶ ನಮ್ಮದು ; ಮಳಲಿ ಶ್ರೀ

0
247

ರಿಪ್ಪನ್‌ಪೇಟೆ : ನಮ್ಮ ದೇಶವು ಅನೇಕ ಧರ್ಮಗಳ ಮಹಾಸಾಗರವಾಗಿದ್ದು ಅನೇಕತೆಯಲ್ಲಿ ಏಕತೆಯನ್ನು ಹೊಂದಿ ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮ ಟದಲ್ಲಿ ಸಹಿಷ್ಣುತಾ ಭಾವವನ್ನು ಹೊಂದಿರುವ ದೇಶವಾಗಿದೆ ಎಂದು ಮಳಲಿ ಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಇಂದು ಹಿಂದೂ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಹೊಸ ವರ್ಷದ ಧ್ವಜಾರೋಹಣದ ಯುಗಾದಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವು ಸಹ ಮುಂಚೂಣಿಯಲ್ಲಿದ್ದು ಇಲ್ಲಿನ ಜನತೆ ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮದಲ್ಲಿ ಸಹಿಷ್ಣುತಾಭಾವವನ್ನು ಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಯುಗಾದಿ ಬಂದರೂ ಜನರಲ್ಲಿ ಉತ್ಸಾಹ ಇರಲಿಲ್ಲ ಕೊರೊನಾ ಎಲ್ಲರನ್ನೂ ಕಾಡಿತ್ತು. ನೋವಿನಿಂದ ಮನೆಯಲ್ಲಿ ಉಳಿಯಬೇಕಾಯಿತು. ಯುಗಾದಿ ಬಂದಿತು ಹೋಯಿತು ಎಂದು ಜನ ನಿಟ್ಟುಸಿರು ಬಿಡುವಂತಾಗಿತ್ತು. ಯುಗಾದಿ ಮತ್ತೆ ಬಂದಿದೆ. ಎಲ್ಲಾ ಕಡೆ ಮರ-ಗಿಡಗಳು ಚಿಗುರು ಕಂಡಿವೆ, ಮಾವು-ಬೇವು ಕಂಗೊಳಿಸಿದೆ ಇದರಿಂದ ಜನರಲ್ಲಿ ಈಗ ಹಬ್ಬ ಆಚರಿಸುವ ಹುಮ್ಮಸ್ಸು ಬಂದಿದೆ.

ಪ್ರಕೃತಿ ಎಂದು ನಮಗೆ ಕೈಕೊಟ್ಟಿಲ್ಲ ಈಗ ಯುಗಾದಿಯು ಪ್ರಕೃತಿದತ್ತವಾಗಿ ಬಂದಿದೆ. ನಮ್ಮ ಹಿಂದಿನ ದಿನಗಳನ್ನು ಮರೆತು ಮುಂದಿನ ದಿನಗಳಲ್ಲಿ ಹೊಸ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ ಇದಕ್ಕೆ ನಮ್ಮಲ್ಲಿರುವ ಜಾತಿ-ಮತಗಳ ಹೊಟ್ಟನ್ನು ತೂರಿ ಕಾಳನ್ನು ಆರಿಸಿ ಕೊಳ್ಳೋಣ. ನಮ್ಮ ಹಿರಿಯರು ಈ ವಿಷಯದಲ್ಲಿ ಉತ್ತಮ ಮಾರ್ಗವನ್ನು ತೋರಿಸಿ ಕೊಟ್ಟು ಹೋಗಿದ್ದಾರೆ. ನಮ್ಮ ಯುವಜನಾಂಗ ವಿಶ್ವಮಟ್ಟದಲ್ಲಿ ಇಡೀ ಮನುಕುಲಕ್ಕೆ ಒಳಿತನ್ನು ಬಯಸುವ ನಾಯಕರಾಗಿ ರೂಪುಗೊಳ್ಳುವ ಅವಕಾಶ ಲಭಿಸಿದೆ. ಯುಗಾದಿ ನಮ್ಮಲ್ಲಿ ವಿಶಾಲ ಮನೋಭಾವ ಬೆಳೆಸಿ ಮನುಷ್ಯ ಸಹಜ ಸಂಕುಚಿತ ಮನೋಭಾವವನ್ನು ತೊಡೆದುಹಾಕಲು ಸಹಕಾರಿಯಾಗಲಿ, ಯುಗಾದಿ ಹೊಸ ವರ್ಷದ ಶುಭಕೃತ್ ನಾಮ ಸಂವತ್ಸರವು ಸರ್ವರಿಗೂ ಶುಭವನ್ನು ತರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಎಂ. ಬಿ.ಮಂಜುನಾಥ್, ಸುಧೀಂದ್ರ ಪೂಜಾರಿ, ವೈ.ಜೆ.ಕೃಷ್ಣ, ಭಾಸ್ಕರ ಶೆಟ್ಟಿ, ಮುರುಳಿ, ಕೆರಳ್ಳಿ ದೇವರಾಜ್, ಆರ್ ರಾಘವೇಂದ್ರ, ವಾಸುಶೆಟ್ಟಿ, ಕಗ್ಲಿ ಲಿಂಗಪ್ಪ, ಮೈಕ್ ದಾನಪ್ಪ, ಮೆಡಿಕಲ್ ಸತೀಶ್, ನಾಗಭೂಷಣ್. ಎನ್.ವರ್ತೆಶ್ ಇನ್ನಿತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here