ಸ್ವಧರ್ಮ ನಿಷ್ಟ ಪರಧರ್ಮ ಸಹಿಷ್ಣತೆ ನಾಡಿನ ಧ್ಯೇಯವಾಗಲಿ ; ರಂಭಾಪುರಿ ಜಗದ್ಗುರುಗಳು

0
669

ರಿಪ್ಪನ್‌ಪೇಟೆ: ಧರ್ಮ ಧರ್ಮಗಳಲ್ಲಿ ವ್ಯಕ್ತಿ ವ್ಯಕ್ತಿಗಳಲ್ಲಿ ಭಾವನಾತ್ಮಕ ಸಾಮರಸ್ಯ ಸೌಹಾರ್ದತೆಯಿಂದ ನಡೆದುಕೊಳ್ಳುವಂತಾಗಲಿ. ಸತ್ಯದ ಚಿಂತನೆಗಳನ್ನು ನಾಡಿನ ಜನತೆಗೆ ಬಿತ್ತರಿಸುವುದೇ ಧರ್ಮದ ಚಿಂತನೆಯಾಗಿದೆ ರಂಭಾಪುರಿ ಪೀಠದ ಉದ್ದೇಶವಾಗಿದೆ ಎಂದು ಜಗದ್ಗುರು ಡಾ.ಪ್ರಸನ್ನ ರೇಣುಕಾ ವೀರಸೋಮೇಶ್ವರ ಭಗವತ್ಪಾದರು ಹೇಳಿದರು.

ಹೆದ್ದಾರಿಪುರ ಗ್ರಾಮದ ಶಂಕರಹಳ್ಳಿ ಮಹೇಶ್‌ಗೌಡರ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಆದರ್ಶಮಯ ತತ್ವಸಿದ್ದಾಂತಗಳು ಮೌಲ್ಯಧಾರಿತಾ ಚಿಂತನೆಗಳು ಕುರಿತು ಮುಂದಿನ ಜನಾಂಗಕ್ಕೆ ಪರಿಚಯಿಸುವ ಬಗ್ಗೆ ಸರ್ಕಾರವೇ ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಚರಣೆಯನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಂಸ್ಕೃತಿಯ ವಿ.ಸುನಿಲ್ ಕುಮಾರ್ ಹಾಗೂ ಸಂಸ್ಕೃತಿಯ ನಿರ್ದೇಶಕರಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಜಗದ್ಗುರು ರೇಣುಕಾಚಾರ್ಯರು ವಿಶಾಲವಾದ ತತ್ವ ಚಿಂತನೆಗಳು ಒಂದು ವರ್ಗಕ್ಕೆ ಅಲ್ಲ ಬದುಕಿ ಬಾಳುವ ಎಲ್ಲ ವರ್ಗಕ್ಕೂ ಆಶಾದಾಯಕವಾಗಿವೆ ಇಂದಿನ ಅಧುನಿಕ ಯುಗದಲ್ಲಿ ಧಾರ್ಮಿಕ ಪ್ರಜ್ಞೆ ಕುಸಿಯುತ್ತದೆ ಸಂಸ್ಕಾರದ ಕೊರತೆ ಕಾಣುತ್ತಿದೆ ಇದರಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಇದಕ್ಕೆಲ್ಲ ಕಾರಣ. ರಾಜಕಾರಣಿಗಳು ಜಾತಿ ಜಾತಿಯಲ್ಲಿ ಭೇದವನ್ನು ಕಲ್ಪಿಸಿ ಶಾಂತಿಯಲ್ಲಿ ಅಶಾಂತಿಯ ವಾತಾವರಣ ಉಂಟಾಗಲು ಕಾರಣವಾಗಿದೆ. ಹಾಗಾಗದೆ ‘ಸರ್ವ ಜನಾಂಗವು ಶಾಂತಿಯ ತೋಟ’ ಎಂಬುದನ್ನು ಕುವೆಂಪುರವರ ನುಡಿಯಂತೆ ಜನತೆಯು ಆ ಪದಕ್ಕೆ ಬೆಲೆ ತರಬೇಕು ಸಹಿಷ್ಣತಾ ಮನೋಭಾವದಿಂದ ಈ ನಾಡಿನ ಜನತೆಗೆ ಒಳ್ಳೆಯದಾಗಿ ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಸತ್ ಚಿಂತನೆಗಳು ಮೊಳಗಲಿ ಎಂದು ಈ ನಾಡಿನಲ್ಲಿ ತಿಳಿಸುವಂತದ್ದೆ ನಮ್ಮ ಪರಂಪರೆಯ ಉದ್ದೇಶವಾಗಿದೆ ಎಂದರು.

ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರು, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕಲ್ಲೂರು ನಾಗೇಂದ್ರ, ಜಂಬಳ್ಳಿ ಶಾಂತಕುಮಾರ್, ಗಿರೀಶ್‌ ಜಂಬಳ್ಳಿ, ಜಗದೀಶ್ ಹಾರಂಬಳ್ಳಿ, ವೇದಾಕ್ಷಿ, ಮುರುಗೇಂದ್ರಪ್ಪಗೌಡ ಮೂಡಾಗಲು, ಬಸವನಕೊಪ್ಪ ನಿಜಲಿಂಗಪ್ಪ,ಇನ್ನಿತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಬೈಕ್ ರ‍್ಯಾಲಿಯ ಮೂಲಕ ಅದ್ದೂರಿಯಾಗಿ ರಂಭಾಪುರಿ ಜಗದ್ಗುರುಗಳವರನ್ನು ಸ್ವಾಗತದೊಂದಿಗೆ ತಳಲೆ ಗ್ರಾಮಕ್ಕೆ ಪುರಪ್ರವೇಶ ಮಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here