ಸ್ವಾಭಾವಿಕವಾಗಿ ಹರಿಯುತ್ತಿದ್ದ ತುಂಗಾ ನದಿ ಅಪವಿತ್ರವಾಗಿದೆ : ರಾಜೇಂದ್ರ

0
246

ಶೃಂಗೇರಿ: ಸ್ವಾಭಾವಿಕವಾಗಿ ಹರಿಯುತ್ತಿದ್ದ ತುಂಗಾ ನದಿಯನ್ನು ಅಪವಿತ್ರಗೊಳಿಸಿ, ಕುಡಿಯಲು ಆಗದಷ್ಟು ಮಲೀನವಾಗುತ್ತಿದೆ ಎಂದು ಉದ್ಯಮಿ ತಲಕಾನೆ ರಾಜೇಂದ್ರ ಹೇಳಿದರು.

ಅದ್ವೈತಾ ಲ್ಯಾನ್ಸರ್ ಸಭಾಂಗಣದಲ್ಲಿ ತುಂಗಾ ಶುದ್ಧಿಕರಣ ಆಂದೋಲನ ಏರ್ಪಡಿಸಿದ್ದ ತುಂಗಾ ಉಳಿಸಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಸ್ತಾರವಾಗುತ್ತಿರುವ ಪಟ್ಟಣದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಹಾಗೂ ಗಟಾರದ ನೀರು ನೇರವಾಗಿ ನದಿ ಸೇರುತ್ತಿದೆ. ಪ್ರವಾಸಿ ಕೇಂದ್ರವಾಗಿರುವ ಶೃಂಗೇರಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ನದಿಗೆ ತ್ಯಾಜ್ಯ ಹಾಕುತ್ತಿದ್ದಾರೆ. ಕೊಳಚೆ ನೀರು, ಪ್ಲಾಸ್ಟಿಕ್ ತ್ಯಾಜ್ಯ ನದಿಯನ್ನು ಸೇರುತ್ತಿದೆ. ಅಶುದ್ಧವಾದ ನೀರನ್ನು ಸಾರ್ವಜನಿಕರು ಅನಿವಾರ್ಯವಾಗಿ ಕುಡಿಯುತ್ತಿದ್ದು, ಇದು ಅನೇಕ ರೋಗ ರುಜಿನಕ್ಕೆ ಕಾರಣವಾಗುತ್ತಿದೆ. ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ವಿಪತ್ತುಗಳು ಸಂಭವಿಸಿದ್ದು, ನಾವೂ ಇನ್ನೂ ಜಾಗೃತರಾಗದಿದ್ದರೆ ಶೃಂಗೇರಿಯಲ್ಲಿರುವ ಗುಡ್ಡ ಬೆಟ್ಟಗಳು ಭೂಕುಸಿತವಾಗುವುದು ಖಚಿತವಾಗಿದೆ. ತಾಲೂಕಿನಾದ್ಯಾಂತ ಬಡಾವಣೆ ನಿರ್ಮಾಣವಾಗುತ್ತಿದೆ. ಆದರೆ ಬಡಾವಣೆಯಿಂದ ಉಪಯೋಗಿಸಿದ ನೀರು ಸಂಸ್ಕರಣೆಯಾಗದೆ ನೇರವಾಗಿ ನದಿ ಸೇರುತ್ತಿದೆ. ಈ ಬಗ್ಗೆ ನಾವು ಇನ್ನಾದರೂ ಜಾಗೃತಿಗೊಳ್ಳಬೇಕಾಗಿದೆ ಎಂದರು.

ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಮಾತನಾಡಿ, ನದಿಯ ಉಳಿವಿಗೆ ನಮ್ಮ ಕೈಲಾದ ಪ್ರಯತ್ನ ನಮ್ಮಿಂದ ಮೊದಲು ಆಗಬೇಕು. ಸಾರ್ವಜನಿಕರು ನಮ್ಮ ಊರು, ನಮ್ಮ ನದಿ ಎಂಬ ಕಳಕಳಿ ಇರಬೇಕು. ಪ್ಲಾಸ್ಟಿಕ್ ಅನ್ನು ಸಾಧ್ಯವಾದಷ್ಟು ಕಡಿಮೆ ಬಳಸಬೇಕು. ನದಿಯ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು ಎಂದರು.

ಸಭೆಯಲ್ಲಿ ತುಂಗಾ ಉಳಿಸಿ ಯೋಜನೆಗೆ ಆರಂಭಿಕ ಹೋರಾಟಕ್ಕೆ ಯೋಜನೆಯನ್ನು ರೂಪಿಸಲಾಯಿತು. ಮುಂಡಗೋಡು ಶ್ರೀನಿವಾಸಮೂರ್ತಿ, ಸಂತೋಷ್ ಕಾಳ್ಯ, ರಜಿತ್ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here